ಕನಕಗಿರಿ | ಕೈವಾರ ತಾತಯ್ಯನವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ : ಅಭಿಲಾಷ್
Update: 2026-03-03 18:06 IST
ಕನಕಗಿರಿ : ಕೈವಾರ ತಾತಯ್ಯನವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ, ಅವರು ವಿಶ್ವ ಮಾನವತಾವಾದಿ. ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಗ್ರಾಮ ಪಂಚಾಯತ್ ಪ್ರಭಾರಿ ಆಡಳಿತಾಧಿಕಾರಿ ಅಭಿಲಾಷ್ ಸಿ.ಆರ್. ಹೇಳಿದರು.
ತಾಲೂಕಿನ ಗ್ರಾಮ ಪಂಚಾಯತ್ ಆವರಣದಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದರು. ಪ್ರತಿಯೊಬ್ಬರು ಇವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಓ ಚಂದುಸ್ವಾಮಿ, ಬಿಎಫ್ ಟಿ ಅಮರೇಶ ಸಂಕನಾಳ, ಸಿಬ್ಬಂಧಿಗಳಾದ ಕನಕಪ್ಪ, ಸಿದ್ದಪ್ಪ, ಅಕ್ಕಮ್ಮ, ಶ್ರೀದೇವಿ, ರೇಣುಕಾ,ಪ್ರಮುಖರಾದ ಬಸವರಾಜ ಕಟ್ಟಿಮನಿ ಇತರರು ಇದ್ದರು.