×
Ad

ಸಾರಿಗೆ ನೌಕರರ ಮುಷ್ಕರ | ಕೊಪ್ಪಳದಲ್ಲಿ ಪ್ರಯಾಣಿಕರ ಪರದಾಟ

ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರು

Update: 2025-08-05 12:39 IST

ಕೊಪ್ಪಳ : ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದರ ಕಾವು ಕೊಪ್ಪಳ ಜಿಲ್ಲೆಗೂ ತಟ್ಟಿದೆ.

ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳೇ ನಿಂತಿದ್ದು, ಸಾರಿಗೆ ವ್ಯತ್ಯಯ ಉಂಟಾಗಿದೆ. ಇದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕ್ಕಿದ್ದಾರೆ. ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಆಟೋಗಳು, ಮಿನಿ ಬಸ್ ಹಾಗೂ ಇತರೆ ವಾಹನಗಳ ಸಹಾಯದಿಂದ ಪ್ರಯಾಣ ಬೆಳೆಸುತ್ತಿದ್ದಾರೆ.

 

ʼಮುಷ್ಕರದಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದು, ಯಾವುದೇ ರೀತಿ ಕಾನೂನು ಬಾಹಿರವಾಗಿ ಬಂದ್ ಮಾಡಬಾರದು. ಇಗಾಗಲೇ ಜಿಲ್ಲೆಯಿಂದ 12 ಬಸ್ ಗಳು ಸಂಚಾರ ಆರಂಭಿಸಿವೆ, ಆ ಬಸ್‌ಗಳಲ್ಲಿ ನಮ್ಮ ಒಬ್ಬೊಬ್ಬ ಸಿಬ್ಬಂದಿಗಳನ್ನು ಕಳುಹಿಸಿದ್ದೇವೆʼ

- ಡಾ.ರಾಮ್ ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ, ಕೊಪ್ಪಳ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News