×
Ad

ಕೊಪ್ಪಳ | ಗಾಂಜಾ ಮಾರಾಟ ಆರೋಪ : ನಾಲ್ವರ ಬಂಧನ

Update: 2025-08-23 18:27 IST

ಬಂಧಿತ ಆರೋಪಿಗಳು

ಕೊಪ್ಪಳ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು  ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೊಪ್ಪಳ ಜಿಲ್ಲಾ ಪೊಲೀಸರು, ಗಾಂಜಾ ಮಾರಾಟಗಾರರ ಮೇಲೆ ದಾಳಿ ಮಾಡಿ ನಿಂಗಪ್ಪ ಗುರಿಕಾರ(50), ಮಾರುತಿ ಗುರಿಕಾರ (26), ರವಿ ಗುರಿಕಾರ (20), ನಾಗಪ್ಪ ಕುದುರಿಮೋತಿ (38 ) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ಮಾಡಿದ ಸಂದರ್ಭದಲ್ಲಿ ಇವರ ಬಳಿ ಇದ್ದ ಸುಮಾರು 25,200 ರೂ. ಬೆಲೆ ಬಾಳುವ 630 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡದ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಪೊಲೀಸರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ: 149/2025 ಕಲಂ: 20 [b] [ii] [A], NDPS Act  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News