×
Ad

ಕೊಪ್ಪಳ | ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಒಂದೇ: ನ್ಯಾ.ಮಹಾಂತೇಶ ದರಗದ

Update: 2025-08-06 19:03 IST

ಕೊಪ್ಪಳ: ನ್ಯಾಯಾಂಗ ವ್ಯವಸ್ಥೆಯಲ್ಲಿ ಬಡವ, ಶ್ರೀಮಂತ ಎನ್ನುವ ಬೇದ ಭಾವವಿಲ್ಲ. ಎಲ್ಲರಿಗೂ ಒಂದೇ ಸಮನಾದ ನ್ಯಾಯದಾನ ಮಾಡುವ ವ್ಯವಸ್ಥೆಯಿಂದ ಅನೇಕ ನೊಂದವರಿಗೆ ನ್ಯಾಯ ದೊರೆಯುತ್ತಿದೆ ಎಂದು ಕೊಪ್ಪಳದ ನ್ಯಾ.ಮಹಾಂತೇಶ ದರಗದ ಹೇಳಿದರು.

ಪಟ್ಟಣದ ಹೊರವಲಯದ ಗದಗ ರಸ್ತೆಯಲ್ಲಿರುವ ಶಿವಪ್ರೀಯಾ ಕಾನೂನು ವಿದ್ಯಾಲಯದಲ್ಲಿ ಐದು ವರ್ಷದ ಕಾನೂನು ಪದವಿ ತರಗತಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ಪಧವಿ ನಂತರ ಕಾನೂನು ಅಭ್ಯಾಸಕ್ಕೆ ಅವಕಾಶವಿತ್ತು. ಆದರೆ, ಈ ಭಾರಿ ಪಿಯುಸಿ ನಂತರ ನೇರವಾಗಿ ಐದು ವರ್ಷದ ಕಾನೂನು ಪದವಿ ವ್ಯಾಸಂಗಕ್ಕೆ ಅವಕಾಶ ಸಿಕ್ಕಿರುವುದು ಈ ಜಿಲ್ಲೆಯ ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ. ಅದರಂತೆ ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವ ನ್ಯಾಯಾದೀಶರಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಪೀರಾಹುಸೇನ್, ಹೊಸಳ್ಳಿ, ರಾಘವೇಂದ್ರ ಘಾನಘಂಟಿ, ಪಿನಿಕ್ಸ್ ಬಿ., ಇಡಿ ಕಾಲೇಜ್ ಪ್ರಾಚಾರ್ಯ ರಾಜಶೇಖರ, ಶಿವಪ್ರೀಯಾ ಕಾನೂನು ವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹನಸಿ, ಉಪನ್ಯಾಸಕಿ ರಜೀಯಾಬೇಗಂ ಸೇರಿದಂತೆ ಇನ್ನೀತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News