×
Ad

ಕೊಪ್ಪಳ |ಪ್ರಾಧ್ಯಾಪಕಿ ಶೈಲಜಾಗೆ ಪಿ.ಎಚ್.ಡಿ. ಪದವಿ ಪ್ರದಾನ

Update: 2025-09-16 13:49 IST

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶೈಲಜಾ ಅರಳೆಲೆಮಠ ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ವಿಷಯದಲ್ಲಿ ಪಿ.ಎಚ್.ಡಿ. ಪ್ರದಾನ ಮಾಡಲಾಗಿದೆ.

ಪ್ರೊ. ವೆಂಕೋಬಾ ನಾರಾಯಣಪ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆಫ್ ಸೋಷಿಯಲ್, ಎಮೋಶನಲ್ ಐಂಡ್ ಕಾಗ್ನಿಟಿವ್ ಡೆವೆಲಪ್‌ಮೆಂಟ್‌ ಆಫ್ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ್‌ ಇನ್ ರಿಲೇಶನ್ ಟು ದೇರ್ ಅಕ್ಯಾಡೆಮಿಕ್ ಅಚೀವ್‌ಮೆಂಟ್‌ʼʼ ಎಂಬ ಮಹಾಪ್ರಬಂದಕ್ಕೆ ಪದವಿ ನೀಡಿದ್ದು , ಗವಿಮಠದ ಶ್ರೀಗಳು, ಆಡಳಿತ ಮಂಡಳಿಯವರು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಸೇರಿದಂತೆ ಸಕಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News