×
Ad

ಕೊಪ್ಪಳದ ನಗರಸಭೆಯ ಅಧಿಕಾರಿ, ಗುತ್ತಿಗೆದಾರರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Update: 2025-09-16 12:41 IST

ಕೊಪ್ಪಳ : ಕೊಪ್ಪಳ ನಗರಸಭೆಯಲ್ಲಿ 10 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೊಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದೆ.

ಲೊಕಾಯುಕ್ತ ಡಿವೈಎಸ್‌ಪಿ ವಸಂತಕುಮಾರ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಗರಸಭೆಯ ಜಿಇ ಸೋಮಲಿಂಗಪ್ಪ, ಕಂದಾಯಾಧಿಕಾರಿ ಉಜ್ಚಲ, ನಗರಸಭೆ ಅಧ್ಯಕ್ಷರ ಸಹೋದರ ಶಕೀಲ ಪಟೇಲ್ ಮತ್ತು ಗುತ್ತಿಗೆದಾರ ಪ್ರವೀಣ ಕಂದಾರಿ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ.

2023-24ನೇ ಸಾಲಿನ ಅನುದಾನದಲ್ಲಿ ದುರ್ಬಳಕೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 336 ಕಾಮಗಾರಿಗಳಲ್ಲಿ 10 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ತಿಳಿದುಬಂದಿದೆ. ಹಲವೆಡೆ ಕಾಮಗಾರಿ ಮಾಡದೇ ಅವ್ಯವಹಾರ ನಡೆಸಿದ್ದಾರೆ ಹಾಗೂ ಕೆಲ ಕಡೆ ಅರ್ಧಮುರಿದ ಕಾಮಗಾರಿಯಷ್ಟೇ ಮಾಡಲಾಗಿದೆ ಎಂದು ದೂರುಗಳಲ್ಲಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News