×
Ad

ಮಂಡ್ಯ | ತಂದೆಯ ನಿಧನದ ನೋವಿನ ಮಧ್ಯೆಯೂ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ

Mandya | Student writes SSLC exam despite pain of father's death

Update: 2025-03-26 10:49 IST

ಮಂಡ್ಯ : ತಾಲೂಕಿನ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಿಂದಗಿರಿದೊಡ್ಡಿ ಗ್ರಾಮದ ಬಾಲಾಜಿ ಎಂಬ ವಿದ್ಯಾರ್ಥಿಯು ತಂದೆಯ ನಿಧನದ ನೋವಿನ ಮಧ್ಯೆಯೂ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾನೆ.

ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗೆ ಪರೀಕ್ಷಾ ಸಮಯದಲ್ಲಿ ತಂದೆ ನಿಧನರಾಗಿರುವುದು ತೀವ್ರ ಅಘಾತವನ್ನುಂಟು ಮಾಡಿದೆ. ಬುಧವಾರ ಬೆಳಗ್ಗೆ ಬೆಳಗ್ಗೆ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಎನ್.ದೇವರಾಜು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿ.ಎಂ.ಮಹೇಶ್, ಶಿಕ್ಷಕರಾದ ಬಸವರಾಜು, ಅಣ್ಣೇಗೌಡ, ರವಿಶಂಕರ್ ಮತ್ತು ವಿದ್ಯಾರ್ಥಿಯ ಸಹಪಾಠಿಗಳು ವಿದ್ಯಾರ್ಥಿಯ ಮನೆಗೆ ತೆರಳಿ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯವನ್ನು ತುಂಬಿದರು.

ಪರೀಕ್ಷೆ ಮುಗಿದ ನಂತರ ಅಂತ್ಯ ಸಂಸ್ಕಾರ ಮಾಡುವಂತೆ ಸಂಬಂಧಿಕರಿಗೆ ಮನವೊಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News