ಮದ್ದೂರು | ಎತ್ತಿನ ಗಾಡಿಗೆ ಬೈಕ್ ಢಿಕ್ಕಿ: ಯುವಕ ಮೃತ್ಯು
Update: 2025-08-28 20:20 IST
ಮಂಡ್ಯ, ಆ.28 : ನಿಂತಿದ್ದ ಎತ್ತಿನ ಗಾಡಿಗೆ ಬೈಕ್ ಢಿಕ್ಕಿಯಾಗಿ ಯುವಕ ಸಾವನ್ನಪ್ಪಿ, ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಬೋರಾಪುರ ಗೇಟ್ ಬಳಿ ನಡೆದಿರುವುದು ವರದಿಯಾಗಿದೆ.
ಬೋರಾಪುರ ಗ್ರಾಮದ ಸುಹಾಸ್(19) ಮೃತಪಟ್ಟ ಯುವಕನಾಗಿದ್ದು, ತೇಜಸ್(20) ತೀವ್ರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರೂ ಬುಧವಾರ ಗಣಪತಿ ವಿಗ್ರಹ ತರಲು ಮದ್ದೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.