×
Ad

ಮಂಡ್ಯ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 13 ವರ್ಷ ಜೈಲು ಶಿಕ್ಷೆ

Update: 2024-02-17 22:00 IST

ಮಂಡ್ಯ: ಅಪ್ರಾಪ್ತ ವಿಶೇಷಚೇತನ ಬಾಲಕಿಗೆ ಅತ್ಯಾಚಾರ ಆರೋಪಿಗೆ 13 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಅಧಿಕ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ತೀರ್ಪು ನೀಡಿದ್ದಾರೆ.

ಮಂಡ್ಯದ ಸುಭಾಷ್‍ನಗರದ ಎಂ.ಎಸ್.ಮಹೇಶ್ ಎಂಬಾತನೇ ಶಿಕ್ಷೆಗೊಳಗಾದ ಆರೋಪಿ. ಈತ 2022ರಲ್ಲಿ 16 ವರ್ಷದ ವಿಶೇಷಚೇತನ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಹಿಂಭಾಗದ ರಸ್ತೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದನು ಎಂದು ಬಾಲಕಿ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹಾಗೂ ಪೋಷಕರು ದೂರು ನೀಡಲಾಗಿ, ವಿಚಾರಣೆ ನಡೆಸಿದ ಅಂದಿನ ಇನ್ಸ್ ಪೆಕ್ಟರ್ ಎಸ್.ಕೆ.ಕೃಷ್ಣ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅಭಿಯೋಜನೆ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News