Nagamangala | ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಮೃತ್ಯು
Update: 2025-12-07 19:08 IST
ನಾಗಮಂಗಲ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಸೇತುವೆಗೆ ಗುದ್ದಿ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನಾಗತಿಹಳ್ಳಿ ಬಳಿ ನಡೆದಿರುವುದು ವರದಿಯಾಗಿದೆ.
ಚಿಕ್ಕಮಂಗಳೂರು ಪಟ್ಟಣ ವಾಸಿ ಚಂದ್ರೇಗೌಡ (63) ಪತ್ನಿ ಸರೋಜಮ್ಮ(57) ಚಂದ್ರೇಗೌಡರ ಚಿಕ್ಕಮ್ಮನಾದ ಜಯಮ್ಮ (70 ) ಮೃತರು ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಬಿಂಡಿಗನವಿಲೆ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.