×
Ad

ಮಂಡ್ಯ: ಕತ್ತು ಕೊಯ್ದು ಯುವಕನ ಕೊಲೆ

Update: 2023-12-15 19:42 IST

ಮಂಡ್ಯ: ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಫ್ಯಾಕ್ಟರಿ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.

ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ ಜಯಮ್ಮ ದಂಪತಿ ಪುತ್ರ ಗುರುವಿಲಾಸ್(35) ಕೊಲೆಯಾದ ಯುವಕ. ಬಾರ್ ನಲ್ಲಿ ಕುಡಿದು ನಂತರ ಜಗಳ ನಡೆದು ಕೊಲೆಯಾಗಿರಬಹುದು ಎಂದು ಹೇಳಲಾಗಿದೆ.

ಗುರುವಿಲಾಸ್ ಟಾಟಾ ಎಸಿ ಚಾಲಕನಾಗಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್ ಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದನು. ಮೃತ ವ್ಯಕ್ತಿಗೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇದೆ ಎನ್ನಲಾಗಿದೆ.

ಮದುವೆ ನಂತರ ಬೆಂಗಳೂರಿನಲ್ಲಿ ಸ್ವಂತ ಕಾರು ಚಾಲನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಈ ನಡುವೆ ಪತಿ ಪತ್ನಿ ನಡುವೆ ವಿರಸ ಬಂದು ಪತ್ನಿ ಮಾನಸ ತವರು ಮನೆ ಸೇರಿದ್ದರು. ಈತನೂ ಮಂಡ್ಯದ ಬಸವನಗುಡಿಯ ಅಕ್ಕನ ಮನೆಗೆ ಮರಳಿದ್ದನು ಎಂದು ತಿಳಿದು ಬಂದಿದೆ.

ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸ. ಈ ಸಂಬಂಧ ಪೂರ್ವ ಠಾಣಾ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News