'ತಿಥಿ' ಸಿನಿಮಾದ ʼಸೆಂಚುರಿ ಗೌಡʼ ಖ್ಯಾತಿಯ ಸಿಂಗ್ರಿಗೌಡ ನಿಧನ
Update: 2026-01-05 13:13 IST
ಮಂಡ್ಯ: 'ತಿಥಿ' ಸಿನಿಮಾದಲ್ಲಿ ʼಸೆಂಚುರಿಗೌಡʼನ ಪಾತ್ರ ಮಾಡಿ ಗಮನ ಸೆಳೆದಿದ್ದ ಶತಾಯುಸಿ ಸಿಂಗ್ರೀಗೌಡ ವಯೋಸಹಜ ಕಾಯಿಲೆಯಿಂದ ರವಿವಾರ ತಡರಾತ್ರಿ ನಿಧನರಾಗಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೀಗೌಡನ ಕೊಪ್ಪಲು ಗ್ರಾಮದ ಸಿಂಗ್ರೀಗೌಡ, 2015ರಲ್ಲಿ ತೆರೆಕಂಡ ತಿಥಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತನ್ನ ಪಾತ್ರದ ಹೆಸರಾದ ಸೆಂಚುರಿಗೌಡ ಎಂದೇ ಖ್ಯಾತಿ ಪಡೆದಿದ್ದರು.
ಮಂಡ್ಯದ ಹಳ್ಳಿಯ ಸೊಗಡಿನ ಕಥಾಹಂದರ ಹೊಂದಿದ್ದ ತಿಥಿ ಸಿನಿಮಾವು ಜನಪ್ರಿಯತೆಯನ್ನು ಗಳಿಸಿತ್ತಲ್ಲದೆ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಸಿನಿಮಾದಲ್ಲಿ ಬಹುತೇಕ ಹಳ್ಳಿಯ ಸ್ಥಳಿಯರನ್ನೇ ಕಲಾವಿದರಾಗಿ ಬಳಸಿಕೊಳ್ಳಲಾಗಿತ್ತು.