×
Ad

ಮಂಡ್ಯ | ತಮಿಳುನಾಡಿಗೆ ನೀರು ನೀರುಹರಿಸುತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

Update: 2024-03-11 00:09 IST

ಮಂಡ್ಯ: ಕೆಆರ್ ಎಸ್‍ನಿಂದ ತಮಿಳುನಾಡಿಗೆ ನೀರುಹರಿಸುತ್ತಿಲ್ಲ. ಬೆಂಗಳೂರಿಗೆ ಕುಡಿಯಲು ನದಿಗೆ ನೀರು‌ ಹರಿಸಲಾಗಿದೆ. ನಮ್ಮ ರೈತರಿಗೇ ನೀರು ಕೊಡಲು ಆಗುತ್ತಿಲ್ಲ, ಇನ್ನು ತಮಿಳುನಾಡಿಗೆ ಎಲ್ಲಿಂದ ತಂದು ಕೊಡುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ರವಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬುದ್ಧಿ ಭ್ರಮಣೆ ಆಗಿದೆ. ಅವರಿಗೆ ನಿಜವಾಗಿಯೂ ಮಾನ ಮರ್ಯಾದೆ ಇಲ್ಲ. ನಮಗೆ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ಯಾಕೆ ಬಿಡೋಣ ಎಂದು ಪ್ರಶ್ನಿಸಿದರು.

ದೇವೇಗೌಡರು, ಬಿಜೆಪಿಯವರಿಗೆ ರಾಜ್ಯದ ಜನತೆ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಮೊದಲು ಮೇಕೆದಾಟು ಕಾಮಗಾರಿಗೆ ಅನುಮತಿ ಕೊಡಿಸಲಿ. ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News