ಅಂತರರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ಸ್ ಗೇಮ್ಸ್ | ಸೈಯದ್ ಸರ್ಫರಾಝ್‌ಗೆ ಕಿಕ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ
ಮಂಡ್ಯ: ಥೈಲ್ಯಾಂಡ್‍ನಲ್ಲಿ ಮೇ 24ರಂದು ನಡೆದ 7ನೇ ಅಂತರರಾಷ್ಟ್ರೀಯ ಮತ್ತು ಥಾಯ್ ಮಾರ್ಷಲ್ ಆರ್ಟ್ಸ್ ಗೇಮ್ಸ್ (ISKA) ಕಿಕ್ ಬಾಕ್ಸಿಂಗ್‍ನಲ್ಲಿ ಮಂಡ್ಯದ 9 ವರ್ಷದ ಸೈಯದ್ ಸರ್ಫರಾಝ್ ಅಹ್ಮದ್ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕನ ಸಂಬಂಧಿ ಬೀಬಿ ಅಮೀನ, ಸದರಿ ಪಂದ್ಯಾವಳಿಯಲ್ಲಿ ಮಂಡ್ಯದ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನಗರದ ಮುಹಮ್ಮದ್ ಮಕ್ಕಿ ಹಾಗೂ ಶೀಬಾ ಅವರರ ಪುತ್ರ ಸೈಯದ್ ಸರ್ಫರಾಝ್ ಅಹ್ಮದ್ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ್ದಾನೆ ಎಂದರು.
ಸೈಯದ್ ಸರ್ಫರಾಝ್ ಮಂಡ್ಯದ ಶ್ರೀಚೈತನ್ಯ ಶಾಲೆಯ ವಿದ್ಯಾರ್ಥಿಯಾಗಿದ್ದು, ತಾನು 3 ವರ್ಷದ ಬಾಲಕನಾಗಿದ್ದಾಗಿನಿಂದಲೂ ಸ್ಕೇಟಿಂಗ್ ಹಾಗೂ ಕಿಕ್‍ಬಾಕ್ಸಿಗ್ ತರಬೇತಿಯನ್ನು ಒಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಪಡೆಯುತ್ತಿದ್ದಾನೆ ಎಂದರು.
ಸೈಯದ್ ಸ್ಕೇಟಿಂಗ್ ವಿಭಾಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ 35ಕ್ಕೂ ಹೆಚ್ಚು, ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ 25ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿನ್ನದ ಪದಕ ವಿಜೇತ ಸೈಯದ್ ಸರ್ಫರಾಝ್ ಅಹ್ಮದ್ ಹಾಗೂ ಶೀಬಾ ಉಪಸ್ಥಿತರಿದ್ದರು.