Mandya | ಮಹಿಳಾ ಪಿಎಸ್ಸೈಗೆ ಶಾಸಕ ಸುರೇಶ ಗೌಡ ಪುತ್ರಿ ಹಲ್ಲೆ ಪ್ರಕರಣ: ಮತ್ತಷ್ಟು ವಿಡಿಯೋಗಳು ಬಹಿರಂಗ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಮಾರಮ್ಮನ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಅಧಿಕಾರಿ ಸವಿತಾ ಬಿ.ಪಾಟೀಲ್ ಹಾಗೂ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ಗೌಡರ ಪುತ್ರಿ ಐಶ್ವರ್ಯಾ ನಡುವೆ 20 ದಿನಗಳ ಹಿಂದೆ ನಡೆದಿದ್ದ ಮಾತಿನ ಚಕಮಕಿಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಆ.12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದಲ್ಲಿ ವಿಶೇಷ ಪೂಜೆ ಸಲ್ಲಿಸಲು ಐಶ್ವರ್ಯ ಅವರು ಮದ್ದೂರು ಪೊಲೀಸ್ ಠಾಣೆಯ ಪಿಎಸ್ಸೈ ಶೇಖರ್ ಮತ್ತು ಇತರರೊಡನೆ ಆಗಮಿಸಿದ್ದಾಗ ದೇವಸ್ಥಾನದ ಭದ್ರತೆಗೆ ನಿಯೋಜನೆಗೊಂಡಿದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಸೈ ಸವಿತಾ ಬಿ. ಪಾಟೀಲ್ ಅವರ ಮೇಲೆ ಐಶ್ವರ್ಯ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದರು ಎಂದು ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದು ಸಂಜೆ ಸುಮಾರು 4:30ರ ಸಮಯದಲ್ಲಿ ಐಶ್ವರ್ಯಾ ನಿಯಮ ಉಲ್ಲಂಘಿಸಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಸೈ ಸವಿತಾ ಬಿ.ಪಾಟೀಲ್ ತಡೆದಿದ್ದಾರೆ. ಈ ವೇಳೆ ಐಶ್ವರ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಪಾಳ ಮೋಕ್ಷ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಸವಿತಾ ಬಿ.ಪಾಟೀಲ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಐಶ್ವರ್ಯ ವಿರುದ್ಧ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಸೆಕ್ಷನ್ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಈ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಮಧ್ಯೆ ತಮ್ಮ ಮಗಳ ಪರವಾಗಿ ಶಾಸಕ ಸುರೇಶ್ ಗೌಡ ಕ್ಷಮೆ ಯಾಚಿಸಿದ್ದರು.
ಇದೀಗ ಅಂದು ಉಕ್ಕಡ ಮಾರಮ್ಮನ ದೇವಸ್ಥಾನದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಸವಿತಾ ಬಿ.ಪಾಟೀಲ್ ಅವರಿಗೆ ಐಶ್ವರ್ಯ ಕಪಾಳಮೋಕ್ಷ ಮಾಡಿದ್ದು, ಪ್ರತಿಯಾಗಿ ಸವಿತಾ ಕೂಡಾ ಐಶ್ವರ್ಯ ರಿಗೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯ ವ್ಯಕ್ತಪಡಿಸಿದ್ದು, ಪ್ರಕರಣದ ಆರೋಪಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ಷೇಪಿಸಿದ್ದಾರೆ.
Karnataka BJP MLA Suresh Gowda's daughter Aishwarya caught slapping Mandya lady police Savitha inside the temple premises. pic.twitter.com/z7wxlIoTh8
— Mohammed Zubair (@zoo_bear) August 25, 2026
#Karnataka #Breaking
— Mahesh M Goudar (@IamMGoudar) August 25, 2026
More Videos Emerge in PSI-MLA’s Daughter Altercation Case; No Arrest Yet
More videos of the altercation between woman PSI Savita B. Patil and Aishwarya, daughter of BJP MLA B. Suresh Gowda, at the Arathi Ukkada temple in Srirangapatna, Mandya, have now… https://t.co/fwOZoAl8Ll pic.twitter.com/ErsjvNnJK7