ಮಂಗಳೂರು: ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಅಸ್ತಿತ್ವಕ್ಕೆ
ಮಂಗಳೂರು: ರಾಜ್ಯ ವ್ಯಾಪ್ತಿಯ ಬ್ಯಾರಿ ಆಂದೋಲನಾ ನೇತಾರರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬ್ಯಾರಿ ರಿಸರ್ಚ್ ಆಂಡ್ ಸರ್ವಿಸ್ ಸೆಂಟರ್ ಅನ್ನು ಅಸ್ತಿತ್ವಕ್ಕೆ ತಂದು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲಾಗಿದ್ದು, ಇದರ ಸಭೆಯು ಮಂಗಳೂರಿನ ಹಂಪನಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಟ್ರಸ್ಟ್‌ನ ಮುಖ್ಯ ಸಲಹೆಗಾರರಾಗಿ ಎಮ್.ಪಿ. ಬ್ಯಾರಿ ಜೋಕಟ್ಟೆ ಹಾಗೂ ಮುಹಮ್ಮದ್ ಕುಳಾಯಿಯವರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪ್ರಜಾವಾಣಿಯ ಮಾಜಿ ಸಂಪಾದಕ ಬಿ. ಎಮ್. ಹನೀಫ್ ಆಯ್ಕೆಯಾದರು.
ಅಧ್ಯಕ್ಷರಾಗಿ ಬಿ.ಎ. ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಬಿ. ಎ. ಮುಹಮ್ಮದಲಿ ಕಮ್ಮರಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಎ. ಶಂಶುದ್ದೀನ್ ಮಡಿಕೇರಿ, ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಬೈಕಂಪಾಡಿ, ಕೋಶಾಧಿಕಾರಿಯಾಗಿ ಎಮ್. ಮಯ್ಯದ್ದಿ ಬ್ಯಾರಿ ಅಡ್ಡೂರು, ಆಂತರಿಕ ಲೆಕ್ಕ ಪರಿಶೋಧಕರಾಗಿ ಎಮ್. ಎ. ಬಾವಾ ಪದರಂಗಿಯವರನ್ನು ಆಯ್ಕೆ ಮಾಡಲಾಯಿತು.
ಬೋರ್ಡ್ ಆಫ್ ಟ್ರಸ್ಟಿಗಳಾಗಿ ರಿಯಾಝ್ ಹುಸೈನ್ ಬಂಟ್ವಾಳ, ಎಮ್. ಬಿ. ಅಬ್ದುಲ್ ನಝೀರ್ ಮಠ ಉಪ್ಪಿನಂಗಡಿ, ಎಸ್. ಅಬ್ದುಲ್ ಮಜೀದ್ ಕಣ್ಣೂರು, ಅಬ್ದುಲ್ ಸಲಾಮ್ ಅಬೂಬಕ್ಕರ್ ತೋಡಾರು, ಯಾಕೂಬ್ ಅಹ್ಮದ್ ಸಲಾಮ್ ಗುರುಪುರ, ಎಸ್. ಅಬ್ದುಲ್ ಮಜೀದ್ ಸೂರಿಂಜೆ, ಎನ್. ಇ. ಮುಹಮ್ಮದ್ ಮಲ್ಲೂರು, ಮೊಹಮ್ಮದ್ ಜಾಬಿರ್ ಜೋಕಟ್ಟೆ, ಎಮ್. ಅಬ್ದುಲ್ ಬಶೀರ್ ಮೊಂಟೆಪದವು ಹಾಗೂ ಎಸ್. ಎ. ಮೊಹಮ್ಮದ್ ಕುಂಞ ಉಪ್ಪಿನಂಗಡಿ ಇವರು ಆಯ್ಕೆಯಾದರು.
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಭಾಜನರಾದ ಟ್ರಸ್ಟ್‌ನ ಗೌರವಾಧ್ಯಕ್ಷ ಬಿ. ಎಮ್. ಹನೀಫ್ ರವರನ್ನು ಈ ಸಂದರ್ಭದಲ್ಲಿ ಟ್ರಸ್ಟ್‌ನ ವತಿಯಿಂದ ಗೌರವಿಸಲಾಯಿತು.
ಸದ್ರಿ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣವನ್ನು 2026 ರ ಜನವರಿ 10ಕ್ಕೆ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದು ಟ್ರಸ್ಟ್ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.