×
Ad

ಡಿ.20 ರಿಂದ 30ರವರೆಗೆ ಮಂಜನಾಡಿ ಉರೂಸ್

Update: 2023-11-30 15:40 IST

ಉಳ್ಳಾಲ: ಮಂಜನಾಡಿ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮ ಹೊಂದಿರುವ ಹಝ್ರತ್ ಅಸ್ಸಯ್ಯಿದ್ ಇಸ್ಮಾಯೀಲ್ ಅಲ್ ಬುಖಾರಿ ರವರ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವು ಡಿ.20 ರಿಂದ ಡಿ.30 ವರೆಗೆ ನಡೆಯಲಿದೆ ಎಂದು ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಯ ಗೌರವಾಧ್ಯಕ್ಷ ಕೆ.ಎಸ್ ಆಟಕೋಯ ತಂಙಳ್ ಅವರ ನೇತೃತ್ವದಲ್ಲಿ 20ರಂದು ಬುಧವಾರ ರಾತ್ರಿ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದೆ. ಎ.ಪಿ. ಅಬೂಬಕರ್ ಮುಸ್ಲಿಯಾರ್ ದುಆ ಆಶೀರ್ವಚನ ನೀಡಲಿದ್ದು, ಮಂಜನಾಡಿ ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ) ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಲಿದ್ದು, ಆಶಿಕ್ ದಾರಿಮಿ ಆಲಪ್ಪುಝ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

11ದಿನಗಳ ಕಾಲ ನಡೆಯುವ ಉರೂಸ್ ಧಾರ್ಮಿಕ ಕಾರ್ಯಕ್ರಮ ದಲ್ಲಿ ಫಝಲ್ ಕೋಯಮ್ಮ ತಂಙಳ್ ಕೂರತ್‌,  ಡಾ.ಹಕೀಂ ಅಝ್ಹರಿ, ನೌಫಲ್ ಸಖಾಫಿ ಕಳಸ, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಸಹಿತ ಹಲವು ಧಾರ್ಮಿಕ ಮುಖಂಡರ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಅವರು ತಿಳಿಸಿದರು.

ಡಿ.21ರಂದು ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಿ.22ರಂದು ಸಂಜೆ 6.30 ಗಂಟೆಗೆ ಸಫ್ವಾನ್ ಸಖಾಫಿ ಅವರಿಂದ ಅರಿವಿನ್ ನಿಲಾವ್ ಕಾರ್ಯಕ್ರಮ ನಡೆಯಲಿದೆ. ಡಿ.25ರಂದು ಸಂಜೆ 6.30ಗಂಟೆಗೆ ವಲಿಯುದ್ದೀನ್ ಫೈಝಿ ಯವರಿಂದ ನೂರೇ ಅಜ್ಮೀರ್ ಮಜ್ಲಿಸ್, ಡಿ.26ರಂದು ಸಂಜೆ 6.30 ಗಂಟೆಗೆ ಮದನೀಯಂ ಮಜ್ಲಿಸ್, ಡಿ.29 ಶುಕ್ರವಾರ ಸಂಜೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಡಿ.30ಶನಿವಾರ ರಾತ್ರಿ ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಎಸ್ ಆಟಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು, ಅಸ್ಸಯ್ಯಿದ್ ಯಹ್ಯಾ ಅಲ್ ಬುಖಾರಿ ದುಆ ಆಶೀರ್ವಚನ ನೀಡಲಿದ್ದಾರೆ. ಹಾಫಿಳ್ ಅಹ್ಮದ್ ಕಬೀರ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ಸಂಜೆ 4 ಗಂಟೆ ಯಿಂದ 6ಗಂಟೆಯವರೆ ಸ್ತ್ರೀಯರಿಗೆ, ರಾತ್ರಿ 12ಗಂಟೆಯಿಂದ ಭಾನುವಾರ 6ಗಂಟೆಯವರೆಗೆ ಪುರುಷರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿ ಯಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ,ಮುದರ್ರಿಸ್ ಅಹ್ಮದ್ ಬಾಖವಿ, ಕೋಶಾಧಿಕಾರಿ ಬಸರ ಮೊಯ್ದಿನ್ ಹಾಜಿ, ಮಾಜಿ ಅಧ್ಯಕ್ಷ ಆಲಿಕುಂಞಿಪಾರೆ, ಕಾರ್ಯದರ್ಶಿಗಳಾದ ಎನ್.ಐ.ಮುಹಮ್ಮದ್, ಹಮೀದ್ ಆರಂಗಡಿ, ಸದಸ್ಯ ಇಬ್ರಾಹಿಂ ಅಹ್ಸನಿ ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News