ಮೈಸೂರು | ಧರ್ಮದ ಕಾರಣಕ್ಕೆ ʼದಸರಾ ಉದ್ಘಾಟನೆʼ ವಿರೋಧಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ
ಮೈಸೂರು, ಆ.31 : ಖ್ಯಾತ ಸಾಹಿತಿ, ಕನ್ನಡಕ್ಕೆ ಬೂಕರ್ ಗರಿ ಮುಡಿಸಿದ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟಕರಾಗಿ ಆಗಮಿಸುತ್ತಿರುವುದನ್ನು ಕೇವಲ ಧರ್ಮದ ಕಾರಣಕ್ಕೆ ವಿರೋಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಜನರಂಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ನ್ಯಾಯಾಲಯದ ಎದುರು ಗಾಂಧಿ ಪ್ರತಿಮೆ ಎದುರು ರವಿವಾರ ಜಮಾವಣೆಗೊಂಡ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ನೆಲೆ-ಹಿನ್ನೆಲೆ, ಎಡ ಪಕ್ಷಗಳು, ಸಿಪಿಐ(ಎಂ) ಸೇರಿದಂತೆ ಅನೇಕ ಜನಪರ ಮುಖಂಡರು ಕನ್ನಡಕ್ಕೆ ಅಂತರ್ ರಾಷ್ಟ್ರೀಯ ಮಟ್ಟದ ಮನ್ನಣೆ ದೊರಕಿಸಿದ ಬಾನು ಮುಪ್ತಾಕ್ ದಸರಾ ಉದ್ಘಾಟಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ .ಭಗವಾನ್, ಪತ್ರಕರ್ತ ಟಿ.ಗುರುರಾಜ್, ಹಿರಿಯ ರಂಗಕರ್ಮಿ ಜನಾರ್ದನ್ (ಜನ್ನಿ), ರಂಗಕರ್ಮಿ ಸಿ.ಬಸಲಿಂಗಯ್ಯ, ನೃಪತುಂಗ ಕನ್ನಡ ಶಾಲೆಯ ಕಾರ್ಯದರ್ಶಿ ಸವಿತಾ ಷ.ಮಲ್ಲೇಶ್, ಸಿಪಿಎಂ ಪಕ್ಷದ ಕೆ.ಬಸವರಾಜು ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಚಾಲಕರಾದ ಪ್ರಗತಿಪರ ಒಕ್ಕೂಟ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಾಜಿ, ರತಿರಾವ್, ಪ್ರೊ.ಕಾಳಚನ್ನೇಗೌಡ, ಧನಂಜಯ ಎಲಿಯೂರು, ಹೊಸಕೋಟೆ ಬಸವರಾಜು, ಗೋಪಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಹೋರಾಟಗಾರ ಮೋಹನ್ ಕುಮಾರ್ ಗೌಡ, ಅಶೋಕಪುರಂ ರಾಜಣ್ಣ ಕೆ.ಬಾಲಕೃಷ್ಣ ಜಗದೀಶ್ ಸೂರ್ಯ, ಲತಾಬಿದ್ದಪ್ಪ, ಸುಶೀಲಾ, ಪಿ.ಆರ್. ರಜಿತಾ, ವಿಜಯ ಕುಮಾರ್, ಅಹಿಂದ ಜವರಪ್ಪ, ಖಲೀಂ, ವಕೀಲ ಬಾಬು ರಾಜ್, ಚಂದ್ರು, ಸಿ.ಎನ್.ನರಸಿಂಹ ಮೂರ್ತಿ, ಮೋಹನ್, ಬಲರಾಮ್, ಬಾಲಾಜಿರಾವ್, ವರುಣ ನಾಗರಾಜು, ಲಾ.ಜಗನ್ನಾಥ್, ಪಾಷಾ, ನಾ. ದಿವಾಕರ್, ರಾಘವೇಂದ್ರ, ವರಹಳ್ಳಿ ಆನಂದ ಮತ್ತಿತರರು ಹಾಜರಿದ್ದರು