Hunsur | ತಾಯಿ ಹುಲಿ ಸೆರೆಯ ಬಳಿಕ 4 ಮರಿಗಳನ್ನು ರಕ್ಷಿಸಿದ ಅರಣ್ಯ ಇಲಾಖೆ
ಮೈಸೂರು/ಹುಣಸೂರು : ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಗೌಡನ ಕಟ್ಟೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ರವಿವಾರ ಹುಲಿಯ ಮರಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದ ಹುಲಿಯನ್ನು ನಾಲ್ಕು ದಿನಗಳ ಹಿಂದಷ್ಟೆ ಸೆರೆ ಹಿಡಿದಿದ್ದರು. ಇದೀಗ 4 ಮರಿ ಹುಲಿಗಳನ್ನು ಸಂರಕ್ಷಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಸೀಮಾ , ಪ್ರಭುಗೌಡ, ಫಯಾಜ್, ಪರಮೇಶ್, ಎಸಿಎಫ್ ಲಕ್ಷ್ಮಿಕಾಂತ್, ಮಹದೇವಯ್ಯ, ಆರ್.ಎಫ್.ಓ ನಂದಕುಮಾರ್, ವಿನೋದ್ ಗೌಡ , ಡಿ.ವೈ.ಆರ್.ಎಫ್.ಓ ಚಂದ್ರೇಶ್,ಮಲ್ಲಿಕಾರ್ಜುನ್, ಪರಮೇಶ್, ಮಂಜುನಾಥ್ ಆರಾಧ್ಯ, ಸಂಪತ್,ನವೀನ್, ಸುನಿಲ್ ಭಾಗವಹಿಸಿದ್ದರು.
ಆನೆ ಕಾರ್ಯ ಪಡೆ, ಚಿರತೆ ಕಾರ್ಯ ಪಡೆ, ಹುಣಸೂರು, ವೀರನಹೊಸಹಳ್ಳಿ , ಕೆ ಆರ್ ನಗರ, ಪಿರಿಯಾಪಟ್ಟಣ ವಲಯದ ಗಸ್ತು ವನಪಾಲಕರು ಹಾಗೂ ಸಿಬ್ಬಂದಿಗಳು ಸಹ ಕಾರ್ಯಚರಣೆಯಲ್ಲಿ ಕೈಜೋಡಿಸಿದ್ದರು.
ಅರಣ್ಯ ಇಲಾಖೆ ವೈದ್ಯರುಗಳಾದ ಡಾ.ಆದರ್ಶ, ವಸೀಮ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.