ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರು: ಮೈಸೂರು ಜಿಲ್ಲೆಯ 8 ಸಹ ಶಿಕ್ಷಕರ ಅಮಾನತು
ಮೈಸೂರು : ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಗಣತಿಗೆ ಗೈರಾದ ಮೈಸೂರು ಜಿಲ್ಲೆಯ 8 ಸಹ ಶಿಕ್ಷಕರನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಲಾಗಿದೆ.
ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೆಸರೆ, ಉತ್ತರ ವಲಯ, ಮೈಸೂರು, ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರನಗರ, ಉತ್ತರ ವಲಯ, ಮೈಸೂರು, ಆದರ್ಶ ವಿದ್ಯಾಲಯ, ಜಾಕಿ ಕ್ವಾಟ್ರಸ್, ದಕ್ಷಿಣ ವಲಯ, ಮೈಸೂರು, ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಕರಿಗೌಡರ ಬೀದಿ, ಹುಣಸೂರು ತಾಲ್ಲೂಕು, ಶ್ರೀ ಶಾರದಾ ಪ್ರೌಢಶಾಲೆ, ಬಿ.ಬಿ. ಗಾರ್ಡನ್, ದಕ್ಷಿಣ ವಲಯ, ಮೈಸೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರುಳಯ್ಯನಕೊಪ್ಪಲು, ಹುಣಸುರು ತಾಲ್ಲೂಕು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಿಮುದ್ದನಹಳ್ಳಿ, ಹುಣಸೂರು ತಾಲ್ಲೂಕು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಪುರ, ಹುಣಸೂರು ತಾಲ್ಲೂಕು ಈ ಶಾಲೆಯ ಸಹ ಶಿಕ್ಷಕರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷಾ ಗಣತಿ ಕಾರ್ಯಕ್ಕೆ ಹಾಜರಾಗದೇ ಅಧಿಕಾರಿಗಳ ದೂರವಾಣಿ ಕೆರೆಯನ್ನು ಸ್ವೀಕರಿಸದೇ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ 8 ಸಹ ಶಿಕ್ಷಕರನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಅವರ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.