ಬಾನು ಮುಸ್ತಾಕ್‌ರನ್ನು ಬೆಂಬಲಿಸಿ ಸೆ.9ರಂದು ಚಾಮುಂಡಿ ಬೆಟ್ಟಕ್ಕೆ ನಡಿಗೆ : ದಲಿತ ಮಹಾಸಭಾ
ಸಾಂದರ್ಭಿಕ ಚಿತ್ರ | PC : freepik
ಮೈಸೂರು, ಸೆ.6 : ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಬೆಂಬಲಿಸಿ ದಲಿತ ಮಹಾಸಭಾವು ಸೆ.9ರಂದು ಚಾಮುಂಡಿ ಬೆಟ್ಟಕ್ಕೆ ನಡಿಗೆ ಆಯೋಜಿಸಿದೆ.
ಈ ಕುರಿತು ದಲಿತ ಮಹಾಸಭಾ ಪ್ರಕಟನೆ ಹೊರಡಿಸಿದ್ದು, ಈ ಹಿಂದೆ ನಿಸಾರ್ ಅಹ್ಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜಯ್ಯ ಅವರನ್ನು ಕರೆದು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಯೆಂದು ಹೇಳಿಕೊಳ್ಳುತ್ತಿರುವವರು ಚಕಾರವೆತ್ತಿರಲಿಲ್ಲ. ಆದರೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾಗಿರುವ ಬಾನು ಮಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಸರಕಾರ ಅಹ್ವಾನ ಮಾಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂದು ಪ್ರಯತ್ನ ನಡೆಸುತ್ತಿವೆ.
ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಸುಮಾರು 10 ಸಾವಿರ ಜನರು ‘ಚಾಮುಂಡಿತಾಯಿಯನ್ನು ರಾಜಕೀಯಗೊಳಿಸದಿರಿ ಹಾಗೂ ಕೋಮುಗಲಭೆ ಸೃಷ್ಟಿಸದಿರಿ’ ಎಂಬ ಘೋಷವಾಕ್ಯದಡಿ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯಿಂದ ಚಾಮುಂಡಿಬೆಟ್ಟ ಚಲೋ
ಮೈಸೂರು, ಸೆ.6: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆ ವಿರೋಧ ವ್ಯಕ್ತಪಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಸೆ.9ರಂದು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.