ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುವ ವಸ್ತುಗಳು ಸಿಕ್ಕಿಲ್ಲ : ಜಿ.ಪರಮೇಶ್ವರ್
ಮೈಸೂರು : ಮೈಸೂರು ನಗರದಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳು ಸಿಕ್ಕಿಲ್ಲ. ಎನ್‌ಸಿಬಿ ಅಧಿಕಾರಿಗಳ ಮೈಸೂರಿನಲ್ಲಿ ದಾಳಿ ಫಾಲೋಅಫ್ ಕೇಸ್ ಅಷ್ಟೇ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಿನಾಯಿಲ್ ತಯಾರು ಮಾಡುವ ಫ್ಯಾಕ್ಟರಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಡ್ರಗ್ಸ್ ಸಂಬಂದ ಪಟ್ಟ ಯಾವ ರಾ ಮೆಟಿರಿಯಲ್ಸ್ ಸಿಕ್ಕಿಲ್ಲ. ಅಲ್ಲಿ ಸಿಕ್ಕ ಆರೋಪಿಗಳ ಸಂಬಂಧಿಕರು ಇಲ್ಲಿದ್ದಾರೆ. ಹೀಗಾಗಿ ವಿಚಾರಣೆ ಮಾಡಿದ್ದಾರೆ. ಇಲ್ಲಿ ಯಾರನ್ನು ಸಹ ವಶಕ್ಕೆ ಪಡೆದಿಲ್ಲ ಎಂದು ಹೇಳಿದರು.
ಜಾರ್ಜ್ ರಾಜೀನಾಮೆ ಕೊಡಲು ಮುಂದಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಕಾರಣಕ್ಕೆ ಕೆಲವು ಸ್ನೇಹಿತರು ಇದನ್ನ ಹಬ್ಬಿಸಿದ್ದಾರೆ. ಅಂತಹ ಘಟನೆ ನಡೆದಿಲ್ಲ. ಸ್ನೇಹಿತರು ಬಹಳಷ್ಟು ಜನ ಇದ್ದಾರೆ, ಒಲ್ಡ್ ಮತ್ತು ನ್ಯೂ ಫ್ರೆಂಡ್ಸ್ ಎಲ್ಲರೂ ಈ ರೀತಿ ಹಬ್ಬಿಸಿದ್ದಾರೆ. ಇಂತಹ ಘಟನೆ ಯಾವುದು ನಡೆದಿಲ್ಲ. ಈ ಬಗ್ಗೆ ಜಾರ್ಜ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದೆಲ್ಲಾ ಊಹಾಪೋಹಾ ಅಷ್ಟೇ ಎಂದು ತಿಳಿಸಿದರು.