×
Ad

ನಾನು, ನನ್ನ ಮಗ ಜೈಲಿಗೆ ಹೋಗುವಂಥ ಕೆಲಸ ಮಾಡಿಲ್ಲ : ರೇವಣ್ಣ ವಿರುದ್ಧ ಜಿ.ಟಿ.ದೇವೇಗೌಡ ಆಕ್ರೋಶ

Update: 2024-11-28 15:07 IST

ರೇವಣ್ಣ/ಜಿ.ಟಿ.ದೇವೇಗೌಡ

ಮೈಸೂರು : "ನಾನು, ನನ್ನ ಮಗ ಜೈಲಿಗೆ ಹೋಗುವಂತಹ ಕೆಲಸ ಮಾಡಿಲ್ಲ. ಅಂತಹ ಸ್ಥಿತಿ ಕೂಡ ಬಂದಿಲ್ಲ. ಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು?" ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.

2018ರಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರನನ್ನು ಬಂಧಿಸಲು ಸಿದ್ಧತೆಯಾಗಿತ್ತು. ಆಗ ಎಚ್‍ಡಿಕೆ ಇಲ್ಲದಿದ್ದರೆ ಜಿ.ಟಿ.ದೇವೇಗೌಡ, ತನ್ನ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು ಎಂಬ ಶಾಸಕ ಎಚ್.ಡಿ.ರೇವಣ್ಣ ಹೇಳಿಕೆಗೆ ಗುರುವಾರ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.

ಅಲ್ಲದೆ, ಈ ಸಂಬಂಧ ನನ್ನ ವಿರುದ್ಧ ಆ ಹೇಳಿಕೆ ನೀಡಿದ್ದೇಕೆ ಎಂದು ರೇವಣ್ಣ ಅವರನ್ನು ಬೆಳಗಾವಿ ಅಧಿವೇಶನಕ್ಕೆ ಬಂದಾಗ ಕೇಳುತ್ತೇನೆ ಎಂದು ಹೇಳಿದರು.

ಸಾಮಾನ್ಯವಾಗಿ ತಾನು ಮಾಧ್ಯಮಗಳಿಂದ ದೂರವಿರುತ್ತೇನೆ ಮತ್ತು ತನ್ನ ಗಮನವೆಲ್ಲ ಚಾಮುಂಡೇಶ್ವರಿ ಕ್ಷೇತ್ರದ ಅಬಿವೃದ್ಧಿ ಮೇಲೆ ನೆಟ್ಟಿರುತ್ತದೆ, ಜನರ ಸಮಸ್ಯೆಗಳನ್ನು ಅಲಿಸಿ ಪರಿಹಾರಗಳನ್ನು ಒದಗಿಸುವುದು ತನಗೆ ಇಷ್ಟವಾಗುವ ಕೆಲಸವಾಗಿದೆ. ತಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದಲೂ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News