ಸಿಎಂ ಕುರ್ಚಿ ಗಟ್ಟಿಯಾಗಿದೆ, ಅದರ ಮೇಲೆ ಕುಳಿತಿರುವವರು ಗಟ್ಟಿಯಾಗಿದ್ದಾರೆ: ಸಚಿವ ಡಾ.ಎಚ್.ಸಿ. ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
ಮೈಸೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಗಟ್ಟಿಯಾಗಿದೆ ಅದರ ಮೇಲೆ ಕುಳಿತಿರುವವರು ಗಟ್ಟಿಯಾಗಿದ್ದಾರೆ. ಹಾಗಿದ್ದ ಮೇಲೆ ಬದಲಾವಣೆ ಹೇಗೆ ಸಾಧ್ಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಗಟ್ಟಿಯಾಗಿದೆ. ಅದರ ಮೇಲೆ ಕುಳಿತಿರುವವರು ಗಟ್ಟಿಯಾಗಿದ್ದಾರೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ನಡೆದ ಈಡಿ ದಾಳಿ ಕುರಿತು ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ದಾಳಿ ನಡೆಸಲು ಸಂವಿಧಾನದಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಈಡಿಗೆ ದೂರು ಹೋಗಿರುತ್ತೆ. ಆ ಹಿನ್ನಲೆ ದಾಳಿಯಾಗಿರುತ್ತೆ. ದಾಳಿಯಲ್ಲಿ ರಾಜಕೀಯ ಉದ್ದೇಶವಿರಬಾರದು ಎಂದರು.
ಕಾಲ್ತುಳಿತ ವಿಚಾರಕ್ಕೆ ಬಿಜೆಪಿ ಪ್ರತಿಭಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಪಕ್ಷಗಳು ಇರೋದೇ ವಿರೋಧ ಮಾಡೋಕೆ. ಬೆಂಗಳೂರು ಘಟನೆ ಒಂದು ಹೃದಯವಿದ್ರಾವಕ ಘಟನೆ. ನಿರೀಕ್ಷೆಗಿಂತ ಹೆಚ್ಚಿನ ಜನ ಬಂದು ದುರಂತ ಆಗಿದೆ. ಇಂತಹ ಘಟನೆಗಳು ಬೇರೆ ಕಡೆ ನಡೆದಾಗ ಯಾರು ರಾಜೀನಾಮೆ ಕೊಟ್ಟಿದ್ರು?. ತನಿಖೆ ಬಳಿಕ ತಪ್ಪು ಯಾರದ್ದು ಎಂದು ತಿಳಿಯುತ್ತೆ ಎಂದು ಹೇಳಿದರು.