ಪಿರಿಯಾಪಟ್ಟಣ | ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾದ ಸಚಿವ ಎಚ್.ಸಿ.ಮಹದೇವಪ್ಪ
Update: 2025-02-03 16:12 IST
ಪಿರಿಯಾಪಟ್ಟಣ : ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಪಿರಿಯಾಪಟ್ಟಣ ಸಮೀಪದ ಬೈಲುಕುಪ್ಪೆಯಲ್ಲಿ 14ನೇ ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಿದರು.
ಸಾಮಾಜಿಕ ಶಾಂತಿಯ ಜೊತೆಗೆ ಬುದ್ಧನ ತತ್ವಗಳನ್ನು ಪಸರಿಸುವ ಕೆಲಸ ಮಾಡುತ್ತಿರುವ ದಲೈಲಾಮಾ ಅವರ ಕಾರ್ಯಗಳು ಮತ್ತು ಅವರ ವಿಚಾರಗಳ ಬಗ್ಗೆ ಕೆಲಹೊತ್ತು ಮಾತುಕತೆ ನಡೆಸಿದ ಸಚಿವರು, ಅವರ ಬೇಡಿಕೆಗಳನ್ನು ಆಲಿಸಿದರು.
ಇದೇ ವೇಳೆ ಬೈಲುಕುಪ್ಪೆಯಲ್ಲಿ ನಿರ್ಮಿಸಲಾದ ಬೌದ್ಧ ಮಂದಿರವನ್ನು ಸಚಿವ ಮಹದೇವಪ್ಪ ವೀಕ್ಷಣೆ ಮಾಡಿದರು. ಬಳಿಕ ಅಲ್ಲಿನ ಬೌದ್ದ ಬಿಕ್ಕುಗಳ ಜೊತೆಗೆ ಚರ್ಚಿಸಿದರು.