×
Ad

ಆರೆಸ್ಸೆಸ್‌ನವರು ಹಿಂದೂಗಳಲ್ಲ, ಹಿಂದುತ್ವವಾದಿಗಳು : ಸಚಿವ ಯತೀಂದ್ರ ಸಿದ್ದರಾಮಯ್ಯ

Update: 2026-06-16 16:31 IST

ಮೈಸೂರು : ಆರೆಸ್ಸೆಸ್‌ನವರು ಹಿಂದೂಗಳಲ್ಲ, ಹಿಂದುತ್ವವಾದಿಗಳು. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ? ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರೆಸ್ಸೆಸ್‌ ನೋಂದಣಿ ಮಾಡಿಸಬೇಕೆಂದಿರುವುದು ಕಾನೂನು ಪ್ರಕಾರ ಸರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್‌ ಯಾಕೆ ನೋಂದಣಿ ಮಾಡಿಸಬಾರದು? ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆರೆಸ್ಸೆಸ್‌ ಗೆ ಬೇರೆ ಕಾನೂನು ಇಲ್ಲ, ಆರೆಸ್ಸೆಸ್‌ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಂಡರೂ ವಾಸ್ತವವಾಗಿ ರಾಜಕೀಯ ಸಂಘಟನೆ. ಬಿಜೆಪಿಯ ಪರವಾಗಿ ಕೆಲಸ ಮಾಡುವ ಸಂಸ್ಥೆ, ಹಾಗಾಗಿ ಆರೆಸ್ಸೆಸ್‌ ದೇಶದ ಕಾನೂನುಗಳನ್ನು ಪಾಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಆರೆಸ್ಸೆಸ್‌ ದೇಶದ ಎಲ್ಲಾ ಕಡೆ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಬೆಲೆ ಬಾಳುವ ಕಟ್ಟಡಗಳನ್ನು ಹೊಂದಿದೆ. ಇದೆಲ್ಲವೂ ಎಲ್ಲಿಂದ ಬಂತು ಎಂಬು ಗೊತ್ತಾಗಬೇಕಿದೆ. ಹಾಗಾಗಿ ಆರೆಸ್ಸೆಸ್‌ ಸಂಘ ನೋಂದಣಿ ಮಾಡಿಸಲಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News