×
Ad

ಮೈಸೂರು | ಸಾಲ ಕಟ್ಟಿಲ್ಲ ಎಂದು ಬಾಲಕಿಯನ್ನು ಕರೆದೊಯ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ

Update: 2025-06-20 14:15 IST

PC : freepik

ಮೈಸೂರು : ಮೈಕ್ರೋ ಫೈನಾನ್ಸ್‌ನಿಂದ ತಂದೆ-ತಾಯಿ ಪಡೆದಿದ್ದ ಸಾಲ ಕಟ್ಟಿಲ್ಲ ಎಂದು 7 ವರ್ಷದ ಬಾಲಕಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಬಾಲಕಿಯನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ  ನೀಡಿರುವ ಆರೋಪ ಕೇಳಿ ಬಂದಿದೆ. ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಜೀವನ ನಡೆಸಲು ಮೈಕ್ರೋ ಫೈನಾನ್ಸ್ ನಿಂದ 30 ಸಾವಿರ ಸಾಲ ಪಡೆದಿದ್ದರು.  ಈ ನಡುವೆ ದಂಪತಿ 13 ತಿಂಗಳು ಲೋನ್ ಕಟ್ಟಿದ್ದು  ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಸಿಬ್ಬಂದಿಗಳು ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಬಾಲಕಿಯ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸಿ ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.

ಈಗಲೇ ಹಣ ಬೇಕು ಎಂದು ಸಿಬ್ಬಂದಿಗಳು ಪೀಡಿಸಿದ್ದು, 4 ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ  ವೇಳೆ ಬೆಳಕಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News