×
Ad

ಮೈಸೂರು | ಥಿಯೇಟರ್‌ನ ಗೋಡೆ ಕುಸಿತ : ನಾಲ್ವರಿಗೆ ಗಾಯ

Update: 2024-07-22 17:31 IST

ಮೈಸೂರು : ನಗರದ ಒಲಂಪಿಯಾ ಥಿಯೇಟರ್‌ ಹಿಂಭಾಗದ ಗೋಡೆ ಕುಸಿದು ಒಂದೂವರೆ ಆಣೆ ಗಲ್ಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ ಘಟನೆ ಸಂಭವಿಸಿದ್ದು, ಗಾಯಗೊಂಡ ವ್ಯಾಪಾರಿಗಳನ್ನು ಸತೀಶ್‌, ತಬ್ರೇಜ್‌, ಹರ್ಮನ್‌, ಶಾಕೀಬ್‌  ಎಂದು ಗುರುತಿಸಲಾಗಿದ್ದು, ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಲಂಪಿಯಾ ಥಿಯೇಟರ್‌ ಮಣ್ಣಿನ ಕಟ್ಟಡವಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿದ್ದು, ಬಟ್ಟೆ ವ್ಯಾಪಾರಕ್ಕೆ ಮಳಿಗೆ ನೀಡಲು ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಗೋಡೆ ಕುಸಿದಿದೆ ಎನ್ನಲಾಗಿದೆ.

ಗಾಯಗೊಂಡ ವ್ಯಾಪಾರಿ ಸತೀಶ್‌ ಮಾತನಾಡಿ, ಮಧ್ಯಾಹ್ನ 12.45ರಿಂದ 1 ಗಂಟೆಯೊಳಗೆ ಗೋಡೆ ಕುಸಿದಿದೆ. ಏಕಾಏಕಿ ಗೋಡೆ ನಮ್ಮ ಮೇಲೆ ಬಿದ್ದು, ಇಬ್ಬರು ಹುಡುಗರು ಮಣ್ಣಿನಡಿ ಸಿಲುಕಿದ್ದರು. ಅವರನ್ನು ರಕ್ಷಿಸುವ ವೇಳೆ ಮತ್ತೊಬ್ಬ ಯುವಕ ಗಾಯಗೊಂಡ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News