ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ-2026ರ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ಚಿನ್ನದ ಅಂಬಾರಿಯನ್ನು ಈ ಬಾರಿ ʼಪ್ರಶಾಂತʼ ಆನೆ ಹೊರಲಿದ್ದಾನೆ.

ಈ ಸಂಬಂಧ ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಘೋಷಿಸಿದರು.

ದಸರಾಗೆ ಜಂಬೂ ಸವಾರಿಯೇ ಪ್ರಮುಖವಾಗಿದೆ. ಅಂಬಾರಿ ಹೊರಲು 13 ಆನೆಗಳನ್ನು ತಯಾರಿ ಮಾಡಲಾಗಿತ್ತು. ಅದರಲ್ಲಿ ಅಂಬಾರಿ ಹೊರಲು ಪ್ರಶಾಂತ ಆನೆಯೇ ಸೂಕ್ತ ಎಂದು ನಿರ್ಧರಿಸಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೇ ಪ್ರಶಾಂತ ಆನೆಗೆ 700 ಕೆ.ಜಿ. ಯಿಂದ 1 ಸಾವಿರ ಕೆ.ಜಿ.ವರೆಗೆ ಬಾರ ಹೊರಿಸಿ ತಾಲೀಮು ಮಾಡಿಸಿ ತರಬೇತಿ‌ ನೀಡಲಾಗಿದೆ. ಅಂಬಾರಿ ಹೊರಲು ಅದರ ದೇಹ ಸೂಕ್ತವಾಗಿದೆ ಎಂದು ಹೇಳಿದರು.

ಧನಂಜಯ ಆನೆಯನ್ನು ಮೀಸಲು ಆನೆಯಾಗಿ ಇಡಲಾಗುತ್ತಿದೆ. ಅಭಿಮನ್ಯು ನಿಶಾನೆಯಾದರೆ, ಗೋಪಿ ನೌಫತ್‌ ಆನೆಯಾಗಲಿದ್ದಾನೆ, ಶ್ರೀರಾಮ, ಶ್ರೀಕಂಠ ಸಾಲು ಆನೆಗಳಾಗಲಿವೆ. ಲಕ್ಷದಮಿ, ಏಕಲವ್ಯ, ಸುಗ್ರೀ ಆನೆಗಳು ಇರಲಿವೆ. ಕಾವೇರಿ, ರೂಪ, ಆನೆಗಳು ಪ್ರಶಾಂತನ ಅಕ್ಕ ಪಕ್ಕ ಬರಲಿವೆ, ಚೈತ್ರ ಆನೆ ಕೂಡ ಜೊತೆಗೆ ಸಾಗಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor