×
Ad

ನಂಜನಗೂಡು ನಗರಸಭೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವು

Update: 2023-12-30 12:29 IST

ಮೈಸೂರು: ನಂಜನಗೂಡು ನಗರಸಭೆಯ 20 ನೇ ವಾಡ್೯ ಗೆ (ಮೀಸಲು ಕ್ಷೇತ್ರ) ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಕೀಲ ಪಿ.ಮಹೇಶ್ ಅತ್ತಿಖಾನೆ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ನಗರಸಭೆಯ 20 ನೇ ವಾಡ್೯ ನಿಂದ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ್ದ ದೊರೆಸ್ವಾಮಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು. ಈ ವೇಳೆ ನಗರಭಾ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

ಡಿ.27 ರಂದು 20 ನೇ ವಾಡ್೯ ಗೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದಿಂದ ದೊರೆಸ್ವಾಮಿ, ಬಿಜೆಪಿಯಿಂದ ವಕೀಲ ಪಿ.ಮಹೇಶ್ ಅತ್ತಿಖಾನೆ, ಜೆಡಿಎಸ್ ನಿಂದ ಸುಬ್ರಮಣ್ಯ, ಹಾಗೂ ಪಕ್ಷೇತರ ಅಭ್ಯರ್ಥಿತಾಗಿ ಜಯಲಕ್ಷ್ಮಿ ಸ್ಪರ್ಧೆ ಮಾಡಿದ್ದರು.

ಈ ಉಪಚುನಾವಣೆಯಲ್ಲಿ ಒಟ್ಟು 568 ಮತಗಳು ಚಲಾವಣೆಗೊಂಡಿದ್ದು, ಪಕ್ಷೇತರ ಅಭ್ಯರ್ಥಿ: 5, ಕಾಂಗ್ರೆಸ್: 186, ಬಿಜೆಪಿ: 231, ಜೆಡಿಎಸ್: 144, ನೋಟಾ: 2 ಮತಗಳನ್ನು ಪಡೆದಿದ್ದಾರೆ.

ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಪಿ‌.ಮಹೇಶ್ ಅತ್ತಿಖಾನೆ ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News