×
Ad

ಮೈಸೂರು ದಸರಾದಲ್ಲಿ ಸ್ಯಾಕ್ಸೋಫೋನ್ ಕಛೇರಿ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮನಸೆಳೆದ ಸಂದೀಪ್–ಪ್ರತಿಭಾ ದೇವಾಡಿಗ

Update: 2025-10-02 17:00 IST

ಮೈಸೂರು : ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮೈಸೂರಿನ ಕಲಾ ಮಂದಿರದಲ್ಲಿ ನಡೆದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.

ಬೆಹಾಗ್ ವರ್ಣದಲ್ಲಿ ಆರಂಭಿಸಿ ನಂತರ ಆರಭಿ ರಾಗದ ದುರ್ಗಾಲಕ್ಷ್ಮಿ, ‘ನಟನೆವೀಶಾರದೆ’, ‘ನಾನೇ ಭಾಗ್ಯವಂತ’ ಸೇರಿದಂತೆ ಹಲವಾರು ಜನಪ್ರಿಯ ಕೃತಿಗಳನ್ನು ಸ್ಯಾಕ್ಸೋಫೋನ್ ಜೋಡಿ ಕಲಾವಿದರಾದ ಸಂದೀಪ್ ದೇವಾಡಿಗ ಅರಿಯಡ್ಕ ಮತ್ತು ಪ್ರತಿಭಾ ಸಂದೀಪ್ ದೇವಾಡಿಗ ಅರಿಯಡ್ಕ ಅವರು ನುಡಿಸಿ ಪ್ರೇಕ್ಷಕರನ್ನು ಮೋಹಗೊಳಿಸಿದರು.

ತವಿಲ್‌ನಲ್ಲಿ ಅಭಿಷೇಕ್ ಅರಿಯಡ್ಕ, ತಬಲದಲ್ಲಿ ಕಿಶೋರ್, ರಿದಂ ಪ್ಯಾಡ್‌ನಲ್ಲಿ ಸುಜಯೇಂದ್ರ ಹಾಗೂ ತಾಳದಲ್ಲಿ ಅತೀಶ್ ದೇವಾಡಿಗ ಅರಿಯಡ್ಕ ತಮ್ಮ ವಾದ್ಯ ಕೌಶಲ್ಯದಿಂದ ಕಾರ್ಯಕ್ರಮದ ಸೊಬಗು ಹೆಚ್ಚಿಸಿದರು.

ಕೊನೆಗೆ ‘ವಂದೇ ಮಾತರಂ’ ಹಾಡಿನ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಪ್ರೇಕ್ಷಕರೆಲ್ಲರ ಮನಸೆಳೆದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News