ಹಿರಿಯ ಪತ್ರಕರ್ತ ಶಿವಶಂಕರಸ್ವಾಮಿ ನಿಧನ
Update: 2025-12-31 23:46 IST
ಮೈಸೂರು: ಹಿರಿಯ ಪತ್ರಕರ್ತ, ವಾರದ ಮಿತ್ರ ಪತ್ರಿಕೆ ಸಂಪಾದಕ ಶಿವಶಂಕರಸ್ವಾಮಿ (68) ಅವರು ಬುಧವಾರ ಮಧ್ಯಾಹ್ನ ವಿದ್ಯಾರಣ್ಯಪುರಂ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.1 ರ ಗುರುವಾರ ಮಧ್ಯಾಹ್ನ ಚಾಮುಂಡಿ ಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.