×
Ad

ಪ್ರಧಾನಿ ಮೋದಿ ಕಾರ್ಯಕ್ರಮದ ನಂತರ ಮೈದಾನದ ಸ್ವಚ್ಛತೆ ಮಾಡಿದ ಯದುವೀರ್ ದಂಪತಿ

Update: 2024-04-15 20:26 IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪತ್ನಿ ತ್ರಿಷಿಕಾ ಜೊತೆಗೂಡಿ ಸೋಮವಾರ ಬೆಳಿಗ್ಗೆ ಮಹರಾಜ ಕಾಲೇಜು ಮೈದಾನದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು.

ರವಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಇಂದು ಬೆಳಿಗ್ಗೆ ಮೈದಾನವನ್ನು ನಗರಪಾಲಿಕೆ ಸಿಬ್ಬಂದಿಗಳು ಸ್ವಚ್ಛತೆ ಮಾಡಲು ಮುಂದಾದಾಗ ಯದುವೀರ್ ಒಡೆಯರ್ ಸಹ ತಮ್ಮ ಕಾರಿನಲ್ಲಿ ಪತ್ನಿ ಸಮೇತ ಆಗಮಿಸಿ ಇಬ್ಬರು ಸ್ವಚ್ಛತೆಯಲ್ಲಿ ತೊಡಗಿದ್ದರು.

ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಪೇಪರ್ ಗಳು ಸೇರಿದಂತೆ ಅನೇಕ ವಸ್ತುಗಳನ್ನು ಎತ್ತಿ ಚೀಲದೊಳಕ್ಕೆ ಹಾಕಿದರು.

ಇದೇ ವೇಳೆ ಮಾತನಾಡಿದ ಯದುವೀರ್, ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ, ಮೋದಿಜಿಯವರ ಕಾರ್ಯಕ್ರಮದ ನಂತರ ಮೈದಾನವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಮತ್ತು ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಪ್ರಧಾನಮಂತ್ರಿ ಉಪಕ್ರಮದ ಸ್ವಚ್ ಭಾರತ್ ಅಭಿಯಾನಕ್ಕೆ ಅನುಗುಣವಾಗಿದೆ. ಮೈಸೂರು ನಗರದ ಸ್ವಚ್ಟತೆಗೆ ನನ್ನ ಮೊದಲ ಆದ್ಯತೆ’ ಇದು ಇನ್ನೂ ಮುಂದೆಯೂ ಮುಂದುವರೆಯುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News