×
Ad

ಅರವಿಂದ ಕೇಜ್ರಿವಾಲ್ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಬಯಸುವೆ: I.N.D.I.Aದ ಸಭೆಗೆ ಮೊದಲು ಎಎಪಿ ನಾಯಕಿ ಹೇಳಿಕೆ

Update: 2023-08-30 14:54 IST

Photo: ANI

ಹೊಸದಿಲ್ಲಿ: ವಿರೋಧ ಪಕ್ಷಗಳ ಒಕ್ಕೂಟ I.N.D.I.Aದ ಮೂರನೇ ಸಭೆಗೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ವಕ್ತಾರೆ ಪ್ರಿಯಾಂಕಾ ಕಕ್ಕರ್ ಅವರು ನಮ್ಮ ಪಕ್ಷದ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಅವರು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾಗುವುದನ್ನು ಬಯಸುವುದಾಗಿ ಬುಧವಾರ ಹೇಳಿದ್ದಾರೆ.

ಬುಧವಾರ ಎಎನ್ ಐ ಜೊತೆ ಮಾತನಾಡಿದ ಪ್ರಿಯಾಂಕಾ ಕಕ್ಕರ್, "ನೀವು ನನ್ನನ್ನು ಕೇಳಿದರೆ, ಅರವಿಂದ ಕೇಜ್ರಿವಾಲ್ ಅವರು (ವಿರೋಧ ಪಕ್ಷದ ಮೈತ್ರಿ) ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದರು.

''ಎಎಪಿ ಸಂಚಾಲಕರು ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಡಿತಕ್ಕೆ ವಿಶ್ವಾಸಾರ್ಹ ಸವಾಲಾಗಿ ಹೊರಹೊಮ್ಮಿದ್ದಾರೆ'' ಎಂದು ಅವರು ಹೇಳಿದರು.

"ಪ್ರಧಾನಿಯವರ ಶೈಕ್ಷಣಿಕ ದಾಖಲೆಗಳು ಅಥವಾ ವಿದ್ಯಾರ್ಹತೆಗಳು ಅಥವಾ ಯಾವುದೇ ಸಮಸ್ಯೆಯಾಗಿರಲಿ, ಅರವಿಂದ ಕೇಜ್ರಿವಾಲ್ ಅವರು ಅಸಂಖ್ಯಾತ ವಿಷಯಗಳ ಬಗ್ಗೆ ಧೈರ್ಯದಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ" ಎಂದು ಅವರು ANI ಗೆ ತಿಳಿಸಿದರು.

ಆದಾಗ್ಯೂ, ಅವರ ಹೇಳಿಕೆಯು ಗುರುವಾರ ನಡೆಯಲಿರುವ ಮುಂಬೈ ಸಭೆಯ ಮೊದಲು ಪ್ರತಿಪಕ್ಷದ ಗಳಲ್ಲಿ ಗೊಂದಲ ಮೂಡಿಸಿದ್ದರೂ ಸಹ, I.N.D.I.A ದೇಶವನ್ನು ಹೊಸ ದಿಕ್ಕಿನಲ್ಲಿ ಸಾಗಿಸಲು ಕೆಲಸ ಮಾಡುತ್ತಿದೆ ಎಂದು ಎಎಪಿ ನಾಯಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News