×
Ad

15 ಮಂದಿ ಭಾರತೀಯರಿದ್ದ ಸರಕು ಹಡಗು ಅಪಹರಣ

Update: 2024-01-05 13:56 IST

ಸಾಂದರ್ಭಿಕ ಚಿತ್ರ (X/@OsintTV)

ಹೊಸದಿಲ್ಲಿ: ಸೊಮಾಲಿಯಾದ ಕರಾವಳಿ ಬಳಿ ನಿನ್ನೆ ಸಂಜೆ ‘MV LILA NORFOLK’ ಎಂಬ ಸರಕು ಹಡಗನ್ನು ಅಪಹರಿಸಲಾಗಿದ್ದು, ಈ ಘಟನೆಯ ಮೇಲೆ ನಿಕಟ ನಿಗಾ ವಹಿಸಿರುವ ಭಾರತೀಯ ನೌಕಾಪಡೆಯು, ಆ ಹಡಗಿನತ್ತ ಯುದ್ಧ ನೌಕೆಯನ್ನು ರವಾನಿಸಿದೆ ಎಂದು ಶುಕ್ರವಾರ ಸೇನಾಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಅಪಹರಣಕ್ಕೀಡಾಗಿರುವ ಹಡಗಿನಲ್ಲಿ 15 ಮಂದಿ ಭಾರತೀಯರಿದ್ದು, ಹಡಗಿನ ಸಿಬ್ಬಂದಿಯೊಂದಿಗೆ ಸಂಪರ್ಕವನ್ನು ಸಾಧಿಸಲಾಗಿದೆ.

ಸೇನಾಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಿಂದ ಹಡಗನ್ನು ಅಪಹರಿಸಲಾಗಿದೆ ಎಂಬ ಮಾಹಿತಿಯು ಗುರುವಾರ ಸಂಜೆ ಲಭ್ಯವಾಗಿದೆ. ಇದು ಮಾತ್ರವಲ್ಲದೆ, ಭಾರತದ ನೌಕಾಪಡೆಯ ವಿಮಾನವು ಆ ಹಡಗಿನ ಮೇಲೆ ನಿಕಟ ನಿಗಾ ವಹಿಸಿದೆ.

ಇದರೊಂದಿಗೆ, ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ಚೆನ್ನೈ ಯುದ್ಧ ನೌಕೆಯು ಅಪಹರಣಕ್ಕೀಡಾಗಿರುವ ಹಡಗಿನತ್ತ ಧಾವಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News