×
Ad

ಆಂಧ್ರಪ್ರದೇಶ | ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಪೊಲೀಸರಿಂದ ತಪ್ಪಿಸಿಕೊಂಡು ಕೈದಿ ಪರಾರಿ

Update: 2025-09-23 15:14 IST

ಗೋದಾವರಿ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕುಖ್ಯಾತ ಪಾತಕಿ ಬಟ್ಟುಲ ಪ್ರಭಾಕರ್ ಸೋಮವಾರ ಸಂಜೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಪ್ರಭಾಕರ್ ನನ್ನು ರಾಜಮಹೇಂದ್ರವರಂ ಸೆಂಟ್ರಲ್ ಜೈಲಿನಲ್ಲಿರಿಸಲಾಗಿತ್ತು ಹಾಗೂ ವಿಜಯವಾಡದಲ್ಲಿ ನ್ಯಾಯಾಲಯದ ವಿಚಾರಣೆ ಮುಕ್ತಾಯಗೊಂಡ ನಂತರ ಮರಳಿ ಕರೆ ತರಲಾಗುತ್ತಿತ್ತು. ಆತ ದೇವರಪಲ್ಲಿ ಮಂಡಲ್ ನಲ್ಲಿನ ದುಡ್ಡುಕುರು ಗ್ರಾಮದಲ್ಲಿ ಪೊಲೀಸರ ವಶದಿಂದ ರಾತ್ರಿ ಸುಮಾರು 7.30ರ ವೇಳೆಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ವರದಿಯಾಗಿದೆ. ಆತ ತಪ್ಪಿಸಿಕೊಂಡ ಸಮಯದಲ್ಲಿ ಬಿಳಿ ಟಿ ಶರ್ಟ್ ಹಾಗೂ ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಎನ್ನಲಾಗಿದೆ.

ಆತ ಎಲ್ಲಾದರೂ ಕಂಡು ಬಂದರೆ, ಮಾಹಿತಿ ಹಂಚಿಕೊಳ್ಳುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಆತನ ಬಗ್ಗೆ ವಿಶ್ವಾ ಸಾರ್ಹ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News