×
Ad

ʼಟಿಕ್ ಟಾಕ್ʼ ವಿಡಿಯೋ ಚಿತ್ರೀಕರಿಸುವಾಗ ಬಾಲಕನಿಗೆ ರೈಲು ಢಿಕ್ಕಿ: ವಿಡಿಯೋ ವೈರಲ್

Update: 2024-10-28 17:03 IST

PC : X \ @gharkekalesh

ಢಾಕಾ: ಬಾಂಗ್ಲಾದೇಶದಲ್ಲಿ ಬಾಲಕರ ಗುಂಪೊಂದು ಚಲಿಸುತ್ತಿದ್ದ ರೈಲಿನ ಮುಂದೆ ಟಿಕ್‌ ಟಾಕ್ ವಿಡಿಯೋ ಚಿತ್ರೀಕರಿಸುವಾಗ ರೈಲು ಢಿಕ್ಕಿಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗಿದೆ.

ಲಕ್ಷಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದ ರಂಗ್ಪುರದ ಶಿಂಗಿಮರಿ ರೈಲ್ವೆ ಸೇತುವೆಯಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಯಾವಾಗ ಘಟನೆ ನಡೆದಿದೆ ಎಂಬುವುದು ಸ್ಷಷ್ಟವಾಗಿಲ್ಲ.

ವಿಡಿಯೋದಲ್ಲಿ ಬಾಲಕರ ಗುಂಪು ವೇಗವಾಗಿ ಚಲಿಸುತ್ತಿರುವ ರೈಲಿನ ಬಳಿ ʼಟಿಕ್ ಟಾಕ್ʼ ವೀಡಿಯೊ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಕ್ಷಣ ಮಾತ್ರದಲ್ಲೇ ಹಳಿ ಪಕ್ಕದಲ್ಲಿದ್ದ ಬಾಲಕನಿಗೆ ರೈಲು ಢಿಕ್ಕಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ‌ ವಿಡಿಯೋಗೆ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಅಪಘಾತವನ್ನು ಭಯಾನಕವೆಂದು ಬಣ್ಣಿಸಿದ್ದು, ಕೆಲವರು ಬಾಲಕರ ನಿರ್ಲಕ್ಷ್ಯವನ್ನು ದೂಷಿಸಿದ್ದಾರೆ. ಬಾಲಕ ಬದುಕುಳಿದಿದ್ದಾನೆ ಎಂದು ಕೆಲವರು ಹೇಳಿದರೆ, ಇತರರು ಈ ಘಟನೆ ಎಚ್ಚರಿಕೆಯಾಗಿದೆ ಎಂದು ಹೇಳಿದ್ದಾರೆ. ದಯವಿಟ್ಟು ಅಂತಹ ತಪ್ಪುಗಳನ್ನು ಮಾಡಬೇಡಿ, ಜನರು ತಮ್ಮ ಸುತ್ತ ನಡೆಯುವ ಘಟನೆಯನ್ನು ಹೇಗೆ ತಾನೆ ನಿರ್ಲಕ್ಷಿಸಲು ಸಾಧ್ಯ? ಎಂದು ಕೆಲವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News