×
Ad

ಬಿಹಾರ ವಿಧಾನಸಭಾ ಚುನಾವಣೆ | 15 ಸ್ಥಾನಗಳಿಗೆ ಜಿತನ್ ರಾಮ್ ಮಾಂಝಿ ಪಟ್ಟು

Update: 2025-10-08 20:51 IST

ಜಿತನ ರಾಮ ಮಾಂಜಿ | Photo Credit : NDTV 

ಪಾಟ್ನಾ,ಅ.8: ‘ನಾಲ್ವರು ಶಾಸಕರ ಬಲದ ನಮ್ಮ ಹಿಂದುಸ್ತಾನಿ ಆವಾಮ್ ಮೋರ್ಚಾ(ಎಚ್‌ಎಎಂ) ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟರಲ್ಲಿ ಸ್ಪರ್ಧಿಸಲು ಬಯಸಬಹುದಿತ್ತು, ಆದರೆ ಎನ್‌ಡಿಎ ಪಾಲುದಾರರ ವಿರುದ್ಧ ಹೋರಾಟವನ್ನು ತಪ್ಪಿಸಲು 15 ಸ್ಥಾನಗಳನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಕೇಂದ್ರ ಸಚಿವ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಬುಧವಾರ ಹೇಳಿದ್ದಾರೆ.

‘ನೀವು ನ್ಯಾಯವನ್ನು ಒದಗಿಸಲು ಬಯಸಿದರೆ ನಮಗೆ ಅರ್ಧದಷ್ಟು ಸ್ಥಾನಗಳನ್ನು ನೀಡಿ. ಆದರೆ ಅದು ಸಾಧ್ಯವಾಗದಿದ್ದರೆ ಕೇವಲ 15 ಸ್ಥಾನಗಳನ್ನು ನಮಗೆ ನೀಡಿ ಮತ್ತು ಉಳಿದಿದ್ದನ್ನು ನೀವೇ ಇಟ್ಟುಕೊಳ್ಳಿ’ ಎಂದು ಮಾಂಝಿ ಎಕ್ಸ್ ಪೋಸ್ಟ್‌ ನಲ್ಲಿ ಬಿಜೆಪಿಯನ್ನುದ್ದೇಶಿಸಿ ಹೇಳಿದ್ದಾರೆ.

ಎಚ್‌ಎಎಂ ಸ್ಥಾಪನೆಯಾಗಿ 10 ವರ್ಷಗಳು ಕಳೆದಿದ್ದರೂ ಅದು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕಾಗಿ ಅದು ಎಂಟು ಕ್ಷೇತ್ರಗಳಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಹೀಗಾಗಿ ಮಾಂಜಿ ತನ್ನ ಪಕ್ಷಕ್ಕೆ ಕನಿಷ್ಠ 15 ಸ್ಥಾನಗಳಿಗಾಗಿ ಆಗ್ರಹಿಸುತ್ತಿದ್ದಾರೆ.

ಹಿರಿಯ ಬಿಜೆಪಿ ನಾಯಕರಾದ ಧಮೇಂದ್ರ ಪ್ರಧಾನ್ ಮತ್ತು ವಿನೋದ್ ತಾವ್ಡೆ ಅವರು ಮೂರು ದಿನಗಳ ಹಿಂದೆ ಇಲ್ಲಿಯ ಮಾಂಝಿಯವರ ನಿವಾಸಕ್ಕೆ ಭೇಟಿ ನೀಡಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News