×
Ad

ರಕ್ಷಣಾ ಬೇಹುಗಾರಿಕೆ ಪ್ರಕರಣ: ಕೆನಡಾ ಮೂಲದ ಉದ್ಯಮಿಯ ಬಂಧನ

Update: 2023-08-22 22:05 IST

Photo : PTI 

ಹೊಸದಿಲ್ಲಿ: ರಕ್ಷಣಾ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ಮೂಲದ ಉದ್ಯಮಿಯೋರ್ವರನ್ನು ಸಿಬಿಐ ಬಂಧಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮೇಯಲ್ಲಿ ಪತ್ರಕರ್ತ ಹಾಗೂ ಸೇನೆಯ ನಿವೃತ್ತ ಕಮಾಂಡರ್‌ನನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019ರಿಂದ ಕೆನಡಾದಲ್ಲಿ ಖಾಯಂ ವಾಸವಿರುವ ಉದ್ಯಮಿ ರಾಹುಲ್ ಗಗ್ಗಾಲ್ ಅವರು ಸೋಮವಾರ ಭಾರತಕ್ಕೆ ಆಗಮಿಸುತ್ತಿದ್ದಂತೆ ಬಂಧಿಸಲಾಯಿತು.

ವಿಶೇಷ ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಸಿಬಿಐ ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News