×
Ad

ದಿಲ್ಲಿ: ಹುಮಾಯೂನ್ ಸಮಾಧಿ ಸಂಕೀರ್ಣ ಸಮೀಪ ಕಟ್ಟಡ ಕುಸಿತ; ಐವರ ಸಾವು

Update: 2025-08-15 19:24 IST
Photo | ANI

ಹೊಸದಿಲ್ಲಿ, ಆ. 15: ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿರುವ ಹುಮಾಯೂನ್ ಸಮಾಧಿ ಸಮೀಪದ ಕಟ್ಟಡದ ಗೋಡೆ ಶುಕ್ರವಾರ ಕುಸಿದಿದ್ದು, ಐವರು ಸಾವನ್ನಪ್ಪಿದ್ದಾರೆ.

ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಗಾಗಿ ಜನರ ಗುಂಪೊಂದು ಎರಡು ಕೊಠಡಿಯಲ್ಲಿ ಸೇರಿದ್ದರು. ಈ ಸಂದರ್ಭ ಒಂದು ಕೊಠಡಿಯ ಹಿಂದಿನ ಗೋಡೆ ಕುಸಿಯಿತು. ಆನಂತರ ಛಾವಣಿ ಕುಸಿಯಿತು ಎಂದು ಜಂಟಿ ಪೊಲೀಸ್ ಆಯುಕ್ತ ಸಂಜಯ್ ಜೈನ್ ತಿಳಿಸಿದ್ದಾರೆ.

ದುರ್ಘಟನೆ ಸಂಭವಿಸಿದ ಸ್ಥಳದಿಂದ 10 ಮಂದಿಯನ್ನು ರಕ್ಷಿಸಲಾಯಿತು ಹಾಗೂ ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಎಐಐಎಂಎಸ್) ಹಾಗೂ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಎಂದು ಜೈನ್ ಹೇಳಿದ್ದಾರೆ.

‘‘10 ಜನರಲ್ಲಿ ಎಐಐಎಂಎಸ್ ತುರ್ತು ನಿಗಾ ಕೇಂದ್ರದಲ್ಲಿದ್ದ ಐವರು ಸಾವನ್ನಪ್ಪಿದರು’’ ಎಂದು ಅವರು ತಿಳಿಸಿದ್ದಾರೆ.

ಹುಮಾಯೂನ್ ಸಮಾಧಿಯ ಆವರಣ ಗೋಡೆಯ ಪಕ್ಕದಲ್ಲಿರುವ ಕಟ್ಟಡದ ಛಾವಣಿ ಹಾಗೂ ಗೋಡೆ ಕುಸಿಯಿತು ಎಂದು ದಿಲ್ಲಿ ಸರ್ಕಲ್ನಲ್ಲಿರುವ ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಆರ್.ಕೆ. ಪಟೇಲ್ ತಿಳಿಸಿದ್ದಾರೆ.

‘‘ಇದು ಸಮಾಧಿ ಸಂಕೀರ್ಣದ ಭಾಗವೂ ಅಲ್ಲ, ಎಎಸ್ಐ ಮೇಲ್ವಿಚಾರಣೆಯ ಆಸ್ತಿಯ ಆವರಣದಲ್ಲಿಯೂ ಇಲ್ಲ. ಆದರೆ, ರಕ್ಷಣಾ ಕಾರ್ಯಾಚರಣೆ ಸುಗಮಗೊಳಿಸಲು ಸಮಾಧಿ ಇರುವ ಸ್ಥಳದ ಗೇಟ್ ಅನ್ನು ತೆರೆಯಲಾಯಿತು’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News