×
Ad

ತಮಿಳುನಾಡು | ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಪ್ರಮಾಣಪತ್ರ ಪಡೆಯಲು ನಿರಾಕರಿಸಿದ ಸಂಶೋಧಕಿ

“ರಾಜ್ಯಪಾಲರು ತಮಿಳು ಮತ್ತು ತಮಿಳುನಾಡಿನ ವಿರುದ್ಧ ಕೆಲಸ ಮಾಡಿದ್ದಾರೆ”

Update: 2025-08-13 19:36 IST

ತಿರುನಲ್ವೇಲಿ : ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಂಶೋಧಕಿಯೋರ್ವರು ರಾಜ್ಯಪಾಲ ಆರ್ ಎನ್ ರವಿ ಅವರಿಂದ ತನ್ನ ಡಾಕ್ಟರೇಟ್ ಪದವಿ ಪ್ರಮಾಣಪತ್ರವನ್ನು ಪಡೆಯಲು ನಿರಾಕರಿಸಿದ್ದಾರೆ.

ಘಟಿಕೋತ್ಸವದ ವೇದಿಕೆಯಲ್ಲಿ ಉಪಕುಲಪತಿ ಎನ್ ಚಂದ್ರಶೇಖರ್ ಸೇರಿದಂತೆ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ರಾಜ್ಯಪಾಲರ ಬಳಿ ನಿಂತುಕೊಂಡಿದ್ದರು. ಡಾಕ್ಟರೇಟ್ ಪದವೀಧರರು ವೇದಿಕೆಗೆ ಬಂದು ತಮ್ಮ ಪ್ರಮಾಣಪತ್ರಗಳನ್ನು ಪಡೆದುಕೊಂಡು ತೆರಳುತ್ತಿದ್ದರು. ಆದರೆ, ಜೀನ್ ರಾಜನ್ ಎಂಬ ಡಾಕ್ಟರೇಟ್ ಪದವೀಧರೆ ರಾಜ್ಯಪಾಲ ಆರ್ ಎನ್ ರವಿ ಅವರಿಂದ ಪದವಿ ಪ್ರಮಾಣ ಪತ್ರವನ್ನು ಪಡೆಯಲು ನಿರಾಕರಿಸಿದ್ದಾರೆ. ಉಪಕುಲಪತಿ ಎನ್ ಚಂದ್ರಶೇಖರ್ ಅವರಿಂದ ತನ್ನ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ ರಾಜ್ಯಪಾಲ ಆರ್ ಎನ್ ರವಿ ಅವರು ಕೈಸನ್ನೆ ಮಾಡುವುದು, ಉಪಕುಲಪತಿ ಎನ್ ಚಂದ್ರಶೇಖರ್ ಅವರು ರಾಜ್ಯಪಾಲರಿಂದ ಪ್ರಮಾಣಪತ್ರ ಪಡೆಯುವಂತೆ ಸೂಚಿಸುವುದು ಕಂಡು ಬಂದಿದೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜೀನ್ ರಾಜನ್, ರಾಜ್ಯಪಾಲರು ರಾಜ್ಯಕ್ಕಾಗಿ ಏನು ಮಾಡಿದ್ದಾರೆಂದು ತಿಳಿಸಬೇಕು. ಅದು ನನ್ನ ಪದವಿ. ಆದ್ದರಿಂದ ಅದನ್ನು ಯಾರಿಂದ ಪಡೆಯಬೇಕೆಂದು ನಿರ್ಧರಿಸುವುದು ನನ್ನ ಆಯ್ಕೆಯಾಗಿದೆ. ರಾಜ್ಯಪಾಲರು ತಮಿಳು ಮತ್ತು ತಮಿಳುನಾಡಿನ ವಿರುದ್ಧ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರಿಂದ ಪದವಿ ಪ್ರಮಾಣಪತ್ರ ಸ್ವೀಕರಿಸಲು ಬಯಸಲಿಲ್ಲ ಎಂದು ಹೇಳಿದರು.

ಜೀನ್ ರಾಜನ್ ಅವರು ನಾಗರಕೋಯಿಲ್‌ನಲ್ಲಿ ಕಂಪೆನಿಯೊಂದರಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೀನ್ ರಾಜನ್ ಅವರ ಪತಿ ನಾಗರಕೋಯಿಲ್ ಪಟ್ಟಣದ ಡಿಎಂಕೆಯ ಪದಾಧಿಕಾರಿಯಾಗಿದ್ದಾರೆ ಎಂದು ವರದಿಯಾಗಿದೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News