×
Ad

ಅಂತಿಮ ಹಂತದ ಮತದಾನ | ಉತ್ತರಪ್ರದೇಶದಲ್ಲಿ ಉಷ್ಣಾಘಾತದಿಂದ 33 ಚುನಾವಣಾ ಸಿಬ್ಬಂದಿ ಮೃತ್ಯು

Update: 2024-06-02 23:16 IST

ಸಾಂದರ್ಭಿಕ ಚಿತ್ರ

ಲಕ್ನೋ : ರಾಜ್ಯದ 13 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ 7ನೇ ಹಾಗೂ ಅಂತಿಮ ಹಂತದ ಮತದಾನದ ಸಂದರ್ಭ ಉಷ್ಣಾಘಾತದಿಂದ 33 ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದರೆ ಎಂದು ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ ಅವರು ಹೇಳಿದ್ದಾರೆ.

ಮೃತಪಟ್ಟವರಲ್ಲಿ ಹೋಮ್ ಗಾರ್ಡ್, ಸ್ವಚ್ಛತಾ ಕಾರ್ಮಿಕರು ಹಾಗೂ ಇತರ ಚುನಾವಣಾ ಸಿಬ್ಬಂದಿ ಸೇರಿದ್ದಾರೆ. ಬಲ್ಲಿಯಾ ಲೋಕಸಭಾ ಕ್ಷೇತ್ರದ ಸಿಕಂದರ್‌ಪುರ ಪ್ರದೇಶದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾರನೋರ್ವರು ಕೂಡ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮತಗಟ್ಟೆಯಲ್ಲಿ ನಿಂತುಕೊಂಡಿದ್ದ ಮತದಾರ ರಾಮ್ ಬದಾನ್ ಚೌಹಾಣ್ ಅವರು ಬಿದ್ದು ಪ್ರಜ್ಞೆ ಕಳೆದುಕೊಂಡರು. ಅವರನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.

ಆಯಾ ಕ್ಷೇತ್ರಗಳಲ್ಲಿ ಮೃತಪಟ್ಟ ಚುನಾವಣಾ ಸಿಬ್ಬಂದಿ ಕುರಿತು ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಮೃತಪಟ್ಟ ಚುನಾವಣಾ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೂಡ ಸಲ್ಲಿಸಲಿದ್ದಾರೆ ಎಂದು ಎಂದು ರಿನ್ವಾ ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಆದೇಶದಂತೆ ಮೃತಪಟ್ಟ ಚುನಾವಣಾ ಸಿಬ್ಬಂದಿಯ ಕುಟುಂಬದ ಸದಸ್ಯರಿಗೆ 15 ಲಕ್ಷ ಪರಿಹಾರ ನೀಡಲಾಗುವುದು ಎಂದು ರಿನ್ವಾ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News