×
Ad

ಕಮಲ್ ನಾಥ್ ಅವರ ಫೋನ್ ಹ್ಯಾಕ್ ಮಾಡಿ, ಪಕ್ಷದ ನಾಲ್ವರಿಂದ ತಲಾ 10 ಲಕ್ಷ ರೂ.ಬೇಡಿಕೆ ಇಟ್ಟ ವಂಚಕರು

Update: 2023-07-13 12:22 IST

ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿದ ವಂಚಕರು ಪಕ್ಷದ ನಾಲ್ವರು ನಾಯಕರಿಗೆ ಕರೆ ಮಾಡಿ ಪ್ರತಿಯೊಬ್ಬರಿಂದ 10 ಲಕ್ಷ ರೂ. ಕೇಳಿದ್ದಾರೆ ಎಂದು ಪಕ್ಷದ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಮಾಳವೀಯ ನಗರ ಪ್ರದೇಶದಲ್ಲಿ ಕರೆ ಮಾಡಿ ಹಣ ಸಂಗ್ರಹಿಸಲು ಬಂದ ಇಬ್ಬರು ವ್ಯಕ್ತಿಗಳನ್ನು ಕಾಂಗ್ರೆಸ್ ಪದಾಧಿಕಾರಿಗಳು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.  ಇಬ್ಬರು ವಂಚಕರು ಗುಜರಾತ್ ಮೂಲದವರು ಎಂದು ವಕ್ತಾರರು ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದರು.

ಆರೋಪಿಗಳು ಕಮಲ ನಾಥ್ ಅವರ ಫೋನ್ ಹ್ಯಾಕ್ ಮಾಡಿ ಪಕ್ಷದ ಶಾಸಕ ಸತೀಶ್ ಸಿಕರ್ವಾರ್, ನಿಧಿ ಅಶೋಕ್ ಸಿಂಗ್, ಇಂದೋರ್ ಸಿಟಿ ಕಾಂಗ್ರೆಸ್ ಅಧ್ಯಕ್ಷ ಸುರ್ಜೀತ್ ಸಿಂಗ್ ಚಡ್ಡಾ ಮತ್ತು ಮಾಜಿ ಖಜಾಂಚಿ ಗೋವಿಂದ್ ಗೋಯಲ್ ಅವರಿಂದ ತಲಾ 10 ಲಕ್ಷ ರೂ. ಕೇಳಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಕೆ. ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.

ಗೋಯಲ್ ನಂತರ ವಂಚಕರನ್ನು ಬಲೆಗೆ ಬೀಳಿಸಲು ನಿರ್ಧರಿಸಿದರು, ಹಣಕ್ಕಾಗಿ ಬೇಡಿಕೆ ಇಟ್ಟ ಸಂಖ್ಯೆಗೆ ಮರು ಕರೆ ಮಾಡಿದರು. ಮಾಳವೀಯ ನಗರ ಪ್ರದೇಶದಲ್ಲಿರುವ ತನ್ನ ಕಚೇರಿಗೆ ಬಂದು ಅವರಿಂದ ಹಣ ವಸೂಲಿ ಮಾಡುವಂತೆ ಗೋಯೆಲ್ ಕರೆ ಮಾಡಿದವರನ್ನು ಕೇಳಿಕೊಂಡರು ಗೋಯಲ್ ಅವರ ಕಚೇರಿಗೆ ಹಣ ಸಂಗ್ರಹಿಸಲು ಬಂದ 25 ಮತ್ತು 28 ವರ್ಷದ ಇಬ್ಬರು ವ್ಯಕ್ತಿಗಳನ್ನು ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯದಲ್ಲೇ ಔಪಚಾರಿಕ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಮಿಶ್ರಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News