×
Ad

ಗಾಂಧಿ ಜಯಂತಿ : ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪ್ರಧಾನಿ ಮೋದಿಯಿಂದ ಪುಷ್ಪನಮನ

Update: 2025-10-02 10:30 IST

Photo | economictimes

ಹೊಸ ದಿಲ್ಲಿ: 156ನೇ ಗಾಂಧಿ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ ಘಾಟ್‌ಗೆ ತೆರಳಿ, ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಇದಕ್ಕೂ ಮೊದಲು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, ಮಹಾತ್ಮ ಗಾಂಧೀಜಿಯವರ ಧೈರ್ಯ ಹಾಗೂ ಸಹಾನುಭೂತಿಯನ್ನು ಸ್ಮರಿಸಿದ್ದರು. ವಿಕಸಿತ ಭಾರತವಾಗುವ ಪ್ರಯತ್ನದಲ್ಲಿ ದೇಶವು ಅವರ ಮಾರ್ಗವನ್ನು ಅನುಸರಿಸಲಿದೆ ಎಂದು ಹೇಳಿದರು.

“ತಮ್ಮ ಚಿಂತನೆಗಳ ಮೂಲಕ ಮಾನವ ಚರಿತ್ರೆಯ ದಿಕ್ಕನ್ನು ಬದಲಿಸಿದ ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ನಮನ ಸಲ್ಲಿಸಲು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅದ್ಭುತ ಬದಲಾವಣೆಯಲ್ಲಿ ಧೈರ್ಯ ಮತ್ತು ಸರಳತೆ ಹೇಗೆ ಸಾಧನಗಳಾಗುತ್ತವೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಜನರನ್ನು ಸಬಲೀಕರಣಗೊಳಿಸಲು ಸೇವೆ ಹಾಗೂ ಸಹಾನುಭೂತಿಯ ಶಕ್ತಿ ಅತ್ಯಗತ್ಯ ಸಾಧನಗಳು ಎಂದು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಾಣ ಮಾಡುವ ನಮ್ಮ ಪ್ರಯತ್ನದಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸಲಿದ್ದೇವೆ” ಎಂದು ಅವರು ಭರವಸೆ ನೀಡಿದ್ದಾರೆ.

ಅಕ್ಟೋಬರ್ 2 ಅನ್ನು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. 2007ರಲ್ಲಿ ವಿಶ್ವ ಸಂಸ್ಥೆಯಲ್ಲಿ ಅಂಗೀಕರಿಸಲಾಗಿದ್ದ ಈ ನಿರ್ಣಯಕ್ಕೆ 140ಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News