×
Ad

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ: ಅಥ್ಲೀಟ್ ಗಳ ಐತಿಹಾಸಿಕ ಸಾಧನೆ

Update: 2024-09-04 07:41 IST

ಮರಿಯಪ್ಪನ್ ತಂಗವೇಲು PC: x.com/VishankRazdan

ಪ್ಯಾರೀಸ್: ಪ್ಯಾರಾಲಿಂಪಿಕ್ಸ್ ನ ಆರನೇ ದಿನ ಭಾರತ ಒಂದೇ ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಅತಿಹೆಚ್ಚು ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಇದುವರೆಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ 19 ಪದಕ ಗೆದ್ದದ್ದು ಗರಿಷ್ಠ ಸಾಧನೆ ಎನಿಸಿತ್ತು. ಬುಧವಾರ ಮುಂಜಾನೆ ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಶರದ್ ಕುಮಾರ್ ಬೆಳ್ಳಿ ಹಾಗೂ ಮರಿಯಪ್ಪನ್ ತಂಗವೇಲು ಕಂಚಿನ ಪದಕ ಗೆದ್ದು ಭಾರತದ ಐತಿಹಾಸಿಕ ಸಾಧನೆಗೆ ಕಾರಣರಾದರು. ಭಾರತ ಈ ಕೂಟದಲ್ಲಿ ಇದುವರೆಗೆ 20 ಪದಕಗಳನ್ನು ಗೆದ್ದಿದೆ.

ಇನ್ನೊಂದೆಡೆ ಎಫ್46 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅಜೀತ್ ಸಿಂಗ್ ಹಾಗೂ ಸುಂದರ್ ಸಿಂಗ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು. 400 ಮೀಟರ್ ಟಿ20 ಸ್ಪರ್ಧೆಯಲ್ಲಿ ದೀಪ್ತಿ ಜೀವಂಜಿ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಚಿನ್ನದ ಪದಕ ಗೆದ್ದಿರುವ ಶೂಟರ್ ಅವನಿ ಲೇಖರ ಮಹಿಳೆಯರ 59 ಮೀಟರ್ ರೈಫಲ್ 3 ಪೊಲಿಷನ್ ಫೈನಲ್ ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದ ಭಾಗ್ಯಶ್ರೀ ಜಾಧವ್ ಎಫ್34 ಶಾಟ್ ಪುಟ್ ಸ್ಪರ್ಧೆಯಲ್ಲಿ ಪದಕ ವಂಚಿತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News