ಕೇರಳ | Tiger Census ನಡೆಸುತ್ತಿದ್ದಾಗ ಕಾಡಾನೆ ದಾಳಿ; ವನ್ಯಜೀವಿ ಅಧಿಕಾರಿ ಮೃತ್ಯು
ಸಾಂದರ್ಭಿಕ ಚಿತ್ರ
ತಿರುವನಂತಪುರ, ಡಿ. 6: ಹುಲಿ ಗಣತಿ ನಡೆಸುತ್ತಿದ್ದ ವನ್ಯಜೀವಿ ಅಧಿಕಾರಿಯೋರ್ವರನ್ನು ಕಾಡಾನೆಯೊಂದು ತುಳಿದು ಕೊಂದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಮೃತಪಟ್ಟ ವನ್ಯಜೀವಿ ಅಧಿಕಾರಿಯನ್ನು ಕಾಳಿಮುತ್ತು (52) ಎಂದು ಗುರುತಿಸಲಾಗಿದೆ.
ಕಾಳಿ ಮುತ್ತು ಸೇರಿದಂತೆ ಮೂವರು ವನ್ಯಜೀವಿ ಅಧಿಕಾರಿ ಗಣತಿ ಪ್ರಕ್ರಿಯೆ ನಡೆಸುತ್ತಿರುವಾಗ ಅಟ್ಟಪಾಡಿ ಅರಣ್ಯ ವಲಯದ ಒಳಗೆ ಈ ಘಟನೆ ನಡೆದಿದೆ.
ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ಕಾಡಾನೆ ವನ್ಯಜೀವಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಎಲ್ಲರೂ ಓಡಿದ್ದಾರೆ. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಆದರೆ, ಕಾಳಿಮುತ್ತು ಅವರ ಮೃತದೇಹದ ಸಮೀಪದ ಪ್ರದೇಶದಲ್ಲಿ ಅನಂತರ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಕಾಳಿಮುತ್ತು ಅಗಲಿಯ ನೆಲ್ಲಿಪಥಿ ಬುಡಕಟ್ಟು ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.