×
Ad

ಮಣಿಪುರ ಹಿಂಸಾಚಾರವು ಮೌನವಾಗಿ ಅನುಮೋದಿಸಲ್ಪಟ್ಟ ದ್ವೇಷದ ಅಪರಾಧ: ಮೋದಿ ವಿರುದ್ಧ ಹರಿಹಾಯ್ದ ಮಹುವಾ ಮೊಯಿತ್ರಾ

Update: 2023-08-10 18:35 IST

ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಅಲ್ಲಿನ ಹಿಂಸಾಚಾರವು ಮೌನವಾಗಿ ಅನುಮೋದಿಸಲ್ಪಟ್ಟ ದ್ವೇಷದ ಅಪರಾಧವಾಗಿದೆ ಎಂದರಲ್ಲದೆ ಕಳೆದ ಎರಡು ದಿನಗಳಲ್ಲಿ ಸಂಸತ್ತಿಗೆ ಆಗಮಿಸದೇ ಇದ್ದ ಪ್ರಧಾನಿಯನ್ನು ಟೀಕಿಸಿದರು. ಮಣಿಪುರದಲ್ಲಿ ನಾಗರಿಕ ಯುದ್ಧ ನಡೆಯುತ್ತಿದೆ ಇಂತಹ ಜನಾಂಗೀಯ ಸಂಘರ್ಷ ಕಳೆದ ಕೆಲ ದಶಕಗಳಿಂದ ಭಾರತ ಕಂಡಿಲ್ಲ ಎಂದು ಅವರು ಹೇಳಿದರು.

ಇಂದಿನ ಚರ್ಚೆಗಳ ವೇಳೆ ಎಐಎಂಐಎಂ ಸಂಸದ ಅಸದುದ್ದೀನ್‌ ಉವೈಸಿ ಅವರು ಪ್ರಧಾನಿ ಮತ್ತು ಬಿಜೆಪಿಯನ್ನು ಟೀಕಿಸಿದರು. ಸರ್ಕಾರ ಮುಸ್ಲಿಮರ ವಿರುದ್ಧದ ದೌರ್ಜನ್ಯಗಳನ್ನು ನಿಲ್ಲಿಸಬೇಕು. ಚೀನಾ ಮತ್ತು ಗೋರಕ್ಷಕರಾದ ಮೋನು ಮನೇಸರ್‌ನಂತಹವರು ಭಾರತ ಬಿಟ್ಟು ತೊಲಗಬೇಕು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News