×
Ad

ಮಂಗಳೂರಿನ ರೋಡ್‌ ಶೋ ʼಸ್ಮರಣೀಯʼ: ಪ್ರಧಾನಿ ಮೋದಿ

Update: 2024-04-15 16:31 IST

Photo:X/@BJP4India

ಹೊಸದಿಲ್ಲಿ: ರವಿವಾರ ರಾತ್ರಿ ಮಂಗಳೂರು ನಗರದಲ್ಲಿ ತಾವು ನಡೆಸಿದ ರೋಡ್‌ ಶೋ “ಸ್ಮರಣೀಯವಾಗಿತ್ತು” ಮತ್ತು ಮೈಸೂರಿನಲ್ಲಿ ತಾವು ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಾರ್ವಜನಿಕ ಸಭೆ “ಅತ್ಯಪೂರ್ವ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

“ಮಂಗಳೂರಿನ ರೋಡ್‌ ಶೋ ಸ್ಮರಣೀಯವಾಗಿತ್ತು,” ಎಂದು ಇಂದು ಎಕ್ಸ್‌ನಲ್ಲಿ ಪ್ರಧಾನಿ ಪೋಸ್ಟ್‌ ಮಾಡಿದ್ದಾರೆ. ರವಿವಾರ ಅವರು ನಗರದ ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದ ತನಕ ರೋಡ್‌ ಶೋ ನಡೆಸಿದ್ದರು.

“ಕರ್ನಾಟಕದಾದ್ಯಂತ ಬಿಜೆಪಿ ಮತ್ತು ಜೆಡಿ(ಎಸ್‌)ಗೆ ಇರುವ ಬೆಂಬಲ ಅತ್ಯುತ್ತಮವಾಗಿದೆ, ಜನರು ಕಾಂಗ್ರೆಸ್‌ನಿಂದ ಬೇಸತ್ತಿದ್ದಾರೆ ಮತ್ತು ನಮ್ಮ ಮೈತ್ರಿಕೂಟ ಗೆಲ್ಲಬೇಕೆಂದು ಬಯಸುತ್ತಿದ್ದಾರೆ, ನಮ್ಮ ಮಾಜಿ ಪ್ರಧಾನಿ ರ್ಯಾಲಿಗೆ ಆಗಮಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ನನಗೆ ಬಹಳ ವಿಶೇಷವಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

ದೇವೇಗೌಡ ಕೂಡ ಇಂದು ಪೋಸ್ಟ್‌ ಮಾಡಿ, ಮೈಸೂರಿನಲ್ಲಿ ನಡೆದ ಎನ್‌ಡಿಎ ರ್ಯಾಲಿ ಭಾರೀ ಯಶಸ್ವಿಯಾಗಿದೆ ಎಂದಿದ್ದಾರೆ. “ಪ್ರಧಾನಿಯೊಂದಿಗೆ ಮಾತನಾಡಿ ಖುಷಿಯಾಯಿತು. ರಾಜ್ಯದಲ್ಲಿ ಮೈತ್ರಿಕೂಟಕ್ಕೆ 28 ಸ್ಥಾನಗಳನ್ನು ಗಳಿಸಲು ಹಾಗೂ ದೇಶದಲ್ಲಿ 400 ಸ್ಥಾನಗಳನ್ನು ತಲುಪಲು ಕೊಡುಗೆ ನೀಡಲು ಶ್ರಮಿಸುತ್ತೇವೆ,” ಎಂದು ಅವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News