×
Ad

ಅಜಿತ್ ಪವಾರ್ ಪತ್ನಿಗೆ ಡಿಸಿಎಂ ಪಟ್ಟ, ಮಗನಿಗೆ ಉಪಚುನಾವಣಾ ಟಿಕೆಟ್: ಎನ್‌ಸಿಪಿ ಬೇಡಿಕೆ

Update: 2026-01-30 07:28 IST

PC: PTI

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಬೆನ್ನಲ್ಲೇ, ತೆರವಾಗಿರುವ ಡಿಸಿಎಂ ಹುದ್ದೆಯನ್ನು ಪವಾರ್ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಅವರಿಗೆ ನೀಡಬೇಕು ಹಾಗೂ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಿತ್ ಪವಾರ್ ಪುತ್ರ ಜಯ್ ಅವರಿಗೆ ಟಿಕೆಟ್ ನೀಡಬೇಕು ಎಂದು ಎನ್‌ಸಿಪಿ ಬೇಡಿಕೆ ಮುಂದಿಟ್ಟಿದೆ.

ಗುರುವಾರ ಸುನೇತ್ರಾ ಪವಾರ್ (62) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪಕ್ಷದ ಪ್ರಮುಖರು, ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೇ ಎನ್‌ಸಿಪಿ ನೇತೃತ್ವ ವಹಿಸಿ ಮಹಾಯುತಿ ಸರ್ಕಾರ ಸೇರಬೇಕು ಎಂಬ ಬೇಡಿಕೆ ಮುಂದಿಟ್ಟರು. ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತತ್ಕರೆ ಮತ್ತು ಸಚಿವ ಛಗನ್ ಭುಜಬಲ್ ನಿಯೋಗದಲ್ಲಿದ್ದರು.

ಸಚಿವ ಹಾಗೂ ಅಜಿತ್ ಪವಾರ್ ಅವರ ಕಟ್ಟಾ ಅನುಯಾಯಿ ನರಹರಿ ಝಿರ್ವಾಲ್ ಬಹಿರಂಗವಾಗಿ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. "ನಾನು ಎಲ್ಲ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದು, ಸುನೇತ್ರಾ ಸಂಪುಟ ಸೇರಬೇಕು ಎಂದು ಬಯಸಿದ್ದಾರೆ. ನಾನು ಇದನ್ನು ಬೆಂಬಲಿಸುತ್ತೇನೆ. ಪಕ್ಷದ ಹಿರಿಯ ಸದಸ್ಯರ ಜತೆಗೆ ಈ ಬಗ್ಗೆ ಚರ್ಚಿಸಲಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಅಜಿತ್ ದಾದಾ ತಮ್ಮ ಪುತ್ರ ಜಯ್ ಅವರನ್ನು ಹೆಚ್ಚಿನ ಹೊಣೆಗಾರಿಕೆಗೆ ಸಜ್ಜುಗೊಳಿಸುತ್ತಿದ್ದರು. ಅವರ ನಿಧನದ ಬಳಿಕ ಜಯ್ ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಎಲ್ಲ ಎನ್‌ಸಿಪಿ ಹಿರಿಯ ಮುಖಂಡರು ಇದನ್ನು ಬೆಂಬಲಿಸಿದ್ದಾರೆ" ಎಂದು ನರಹರಿ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News