Nepal Election Result : ಬಾಲೇಂದ್ರ ಶಾ ಅವರ RSPಗೆ ಭಾರೀ ಮುನ್ನಡೆ
Update: 2026-03-06 12:28 IST
ಬಾಲೇಂದ್ರ ಶಾ | Photo Credit : PTI
ಕಠ್ಮಂಡು: ನೇಪಾಳ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಹೊಸದಾಗಿ ರಚನೆಯಾದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (ಆರ್‌ಎಸ್‌ಪಿ) 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟು 57 ಕ್ಷೇತ್ರಗಳಲ್ಲಿ ಬಾಲೇಂದ್ರ ಶಾ ಅವರ ಆರ್‌ಎಸ್‌ಪಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ನೇತೃತ್ವದ ನೇಪಾಳ ಕಮ್ಯುನಿಸ್ಟ್ ಪಕ್ಷವು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ ಒಂದು ಸ್ಥಾನದಲ್ಲಿ ಮುಂದಿದೆ.
ಆರ್‌ಎಸ್‌ಪಿ ಈಗಾಗಲೇ ಕಠ್ಮಂಡು-1, ಕಠ್ಮಂಡು-7 ಮತ್ತು ಕಠ್ಮಂಡು-8 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ. ಕೆ ಪಿ ಶರ್ಮಾ ಓಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಐದು ಸ್ಥಾನಗಳಲ್ಲಿ ಮತ್ತು ಗಗನ್ ಥಾಪಾ ನೇತೃತ್ವದ ನೇಪಾಳ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ.